ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Darshan) ಜಾಮೀನು ಅರ್ಜಿಯ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದೆ.
ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ (Karnataka Highcourt) ಡಿ.9ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಇಂದು ದರ್ಶನ್, ಪವಿತ್ರಾಗೌಡ (Pavitra Gowda), ಪ್ರದೋಷ್ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.
ಇದರೊಂದಿಗೆ ಮಧ್ಯಂತರ ಜಾಮೀನು ಅರ್ಜಿ ವಜಾ ಕೋರಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಕೋರ್ಟ್ ಮುಂದೂಡಿತು. ಎಸ್ ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣಾ ವಾದ ಮಂಡಿಸಿದರು. ದರ್ಶನ್ ಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ, ಲಕ್ವ ಹೊಡೆಯಬಹುದು ಎಂದು ರಿಪೋರ್ಟ್ ನೀಡಿದ್ದರು. ಈಗಾಗಲೇ 2 ರಿಪೋರ್ಟ್ ಕೊಟ್ಟಿದ್ದಾರೆ. ಆ ವರದಿಯಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ. 20 ದಿನದ ಬಳಿಕ ರಿಪೋರ್ಟ್ ಅಲ್ಲಿ ಬಿಪಿ ಏರಿಳಿತಗಳು ಆಗುತ್ತಿವೆ ಎಂದು ವರದಿ ನೀಡಲಾಗಿದೆ. ಯಾವುದೇ ರೋಗಿ Amlong 50 ಎಂಜಿ ತಕ್ಕೊಂಡ್ರೆ, 24 ಗಂಟೆಯಲ್ಲಿ ಬಿಪಿ ನಾರ್ಮಲ್‌ಗೆ ಬರುತ್ತೆ. ಅನಸ್ತೇಶಿಯಾ ಕೊಡುವಾಗ ನಿಯಂತ್ರಣಕ್ಕೆ ತರುತ್ತಾರೆ. ಆದರೆ, ಇಲ್ಲಿ ಸಿನಿಮಾದ ರೀತಿ ಮಧ್ಯಂತರ ಜಾಮೀನನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಮಧ್ಯಂತರ ಜಾಮೀನು ರದ್ದು ಮಾಡಬೇಕೆಂದು ವಾದಿಸಿದರು.
ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಸೋಮವಾರಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತು.








