Darshan
ಬೆಂಗಳೂರು: ರಾಜರಾಜೇಶ್ವರಿ ನಗರ ಉಪಸಮರದಲ್ಲಿ ಬಿಜೆಪಿಯಿಂದ ಅಖಾಡಕ್ಕೆ ಇಳಿದಿರುವ ಮುನಿರತ್ನ ಪರ ಇತ್ತೀಚೆಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೋಡ್ ಶೋ ನಡೆಸಿ ಭರ್ಜರಿ ಪ್ರಚಾರ ನಡೆಸಿದ್ದರು. ಈ ವೇಳೆ ನೆಚ್ಚಿನ ನಟನ ನೊಡಲು ಸಾವಿರಾರು ಜನರು ಮುಗಿಬಿದ್ದಿದ್ದರು. ಆದ್ರೆ ಕೊರೊನಾ ಹಾವಳಿ ನಡುವೆ ಕೋವಿಡ್ ನಿಯಮಗಳ ಗಾಳಿಗೆ ತೂರಿ ಜನರು ಮುಗಿಬಿದ್ದರು. ಇದೀಗ ಇದೇ ಕಾರಣಕ್ಕೆ ಬೃಹತ್ ಮಹಾನಗರ ಪಾಲಿಕೆ ನಟ ದರ್ಶನ್ ವಿರುದ್ಧ ಪ್ರಕರಣ ದಾಖಲು ಮಾಡಿದೆ.
ಆರ್. ಆರ್. ನಗರ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯ 2005ರ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ದರ್ಶನ್ ಮತ್ತು ನಿಯಮ ಉಲ್ಲಂಘಿಸಿದ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಹ ತಿಳಿಸಿದ್ದಾರೆ. ಶುಕ್ರವಾರ ನಟ ದರ್ಶನ್ ಆರ್. ಆರ್. ನಗರ ವ್ಯಾಪ್ತಿಯ ಬಿ. ಕೆ. ನಗರ, ಜೆ. ಪಿ. ಪಾರ್ಕ್, ಯಶವಂತಪುರ ಮುಂತಾದ ಪ್ರದೇಶಗಳಲ್ಲಿ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದರು.
ಪ್ರಚಾರದ ವೇಳೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಕಾರಣಕ್ಕೆ ನಟ ದರ್ಶನ್ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಚಾರದ ವೇಳೆ ಸಾಮಾಜಿಕ ಅಂತರ ಪಾಲನೆ ಮಾಡದ ಕಾರಣ ಅಕ್ಟೋಬರ್ 30 ಮತ್ತು 31ರಂದು ಬಿಬಿಎಂಪಿ 15 ಪ್ರಕರಣಗಳನ್ನು ದಾಖಲು ಮಾಡಿದೆ. ಅಕ್ಟೋಬರ್ 30ರಂದು ಬಿಬಿಎಂಪಿ ಕಾಂಗ್ರೆಸ್ ವಿರುದ್ಧ 3, ಬಿಜೆಪಿ ವಿರುದ್ಧ 4 ಪ್ರಕರಣ ದಾಖಲಿಸಿದೆ. ಅಕ್ಟೋಬರ್ 31ರಂದು ಕಾಂಗ್ರೆಸ್ ವಿರುದ್ಧ 1, ಬಿಜೆಪಿ ವಿರುದ್ಧ 4, ಜೆಡಿಎಸ್ ವಿರುದ್ಧ 2 ಪ್ರಕರಣ ದಾಖಲು ಮಾಡಿದೆ. ಮುನಿರತ್ನ ಪರ ಪ್ರಚಾರದ ಅಖಾಡಕ್ಕೆ ದರ್ಶನ ಇಳಿದಿದ್ದ ವೇಳೆ ಅವರಿಗೆ ಸ್ಯಾಂಡಲ್ ವುಡ್ ನಟಿ ಅಮೂಲ್ಯ ಸಸಹ ಸಾಥ್ ನೀಡಿದ್ದರು. ಪ್ರಚಾರದ ವೇಳೆ ದರ್ಶನ ಅವರ ದರ್ಶನ ಪಡೆಯಲು ಅಭಿಮಾನಿಗಳ ದಂಡೇ ಹರಿದುಬಂದಿತ್ತು.
ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಚಂದನವನದ ತಾರೆಯರು
‘ಪೆಟ್ರೋಮ್ಯಾಕ್ಸ್’ ಮೊದಲ ಹಂತದ ಚಿತ್ರೀಕರಣ 12 ದಿನದಲ್ಲಿ ಮುಕ್ತಾಯ
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರದ್ದು ನಾಯಿಪಾಡು : ಕಟೀಲ್ ವ್ಯಂಗ್ಯ
ಸಿದ್ದರಾಮಯ್ಯ ಮೊದಲು `ಕೈ’ ಒಳಜಗಳ ಸರಿಪಡಿಸಿಕೊಳ್ಳಲಿ: ಬಿ.ಸಿ ಪಾಟೀಲ್ ತಿರುಗೇಟು
Darshan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel