ಡಿಕೆಶಿ ಹಸು ಅಲ್ಲ.. ದರ್ಶನ್ ಕರು ಅಲ್ಲ.. : ಬಂಡೆಗೆ ಸಾಮ್ರಾಟ್ ಡಿಚ್ಚಿ
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಾಕತ್ ಇದ್ದರೆ ದರ್ಶನ್ ರನ್ನ ಪ್ರಚಾರಕ್ಕೆ ಕರೆದುಕೊಂಡು ಬರಲಿ. ಇನ್ನೂ ನಾಲ್ಕು ಗಂಟೆ ಸಮಯ ಇದೆ, ಅಷ್ಟರಲ್ಲಿ ಡಿಕೆಶಿ ದರ್ಶನ್ ಕರೆಸಿ ಪ್ರಚಾರ ಮಾಡಿಸಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ಕನಕಪುರ ಬಂಡೆಗೆ ಸವಾಲ್ ಹಾಕಿದ್ದಾರೆ.
ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ ಹಿನ್ನೆಲೆ ಮಧ್ಯಾಹ್ನ ಊಟಕ್ಕೂ ಹೋಗದೆ ಮುನಿರತ್ನ ಪರವಾಗಿ ಸಚಿವ ಆರ್ ಅಶೋಕ್ ಆರ್ ಆರ್ ನಗರದಲ್ಲಿ ಪ್ರಚಾರ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತ “ನಾನು ಕರೆದರೂ ದರ್ಶನ್ ಬರುತ್ತಾರೆ” ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ದರ್ಶನ್ ಕರು ಅಲ್ಲ.. ಡಿಕೆಶಿ ಹಸು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡಿದ್ದಾರೆ. ನಾನು ಕರೆದರೂ ದರ್ಶನ್ ಬರುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ದರ್ಶನ್ ಕರು ಅಲ್ಲ ಓಡಿ ಬರೋದಕ್ಕೆ, ಡಿಕೆಶಿ ಹಸು ಅಲ್ಲ ಕರೆದ ಕೂಡಲೇ ದರ್ಶನ್ ಬರೋದಿಕ್ಕೆ.
ಇನ್ನೂ ಸಂಜೆ 6 ಗಂಟೆವರೆಗೆ ಸಮಯ ಇದೆ ನಾನೂ ಬಹಿರಂಗ ಪ್ರಚಾರ ಮುಗಿಯೋವರೆಗೂ ಕಾಯುತ್ತೇನೆ. ಸಂಜೆಯ ಒಳಗೆ ಡಿಕೆಶಿಗೆ ತಾಕತ್ ಇದ್ದರೆ ದರ್ಶನ್ ರನ್ನ ಪ್ರಚಾರಕ್ಕೆ ಕರೆದುಕೊಂಡು ಬರಲಿ.
ಇನ್ನೂ ನಾಲ್ಕು ಗಂಟೆ ಸಮಯ ಇದೆ, ಅಷ್ಟರಲ್ಲಿ ಡಿಕೆಶಿ ದರ್ಶನ್ ಕರೆಸಿ ಪ್ರಚಾರ ಮಾಡಿಸಲಿ ಎಂದು ಟ್ರಬಲ್ ಶೂಟರ್ ಗೆ ಸಾಮ್ರಾಟ್ ಸವಾಲ್ ಎಸೆದರು.
ಇದನ್ನೂ ಓದಿ : ವಂಚನೆ, ಬೆನ್ನಿಗೆ ಚೂರಿ ಹಾಕುವುದು ಕಾಂಗ್ರೆಸ್ ಪರಂಪರೆ : ಆರ್.ಅಶೋಕ್
ಆರ್ ಆರ್ ನಗರಕ್ಕೆ ಐದಾರು ಸಾವಿರ ಜನ ಹೊರಗಿಂದ ಬಂದಿದ್ದಾರೆ ಎಂದು ಆರೋಪಿಸಿದ ಆರ್.ಅಶೋಕ್, ಕ್ಷೇತ್ರಕ್ಕೆ ಹೊರಗಿಂದ ಬಂದಿರೋರನ್ನೆಲ್ಲ ಹೊರಗೆ ಕಳಿಸಬೇಕು.
ಕ್ಷೇತ್ರದಲ್ಲಿ ಅಡಗಿ ಕೂತಿರುವವರನ್ನೆಲ್ಲ ಚುನಾವಣಾ ಆಯೋಗ ಹೊರಗೆ ಕಳಿಸಬೇಕು. ಆರ್ ಆರ್ ನಗರದ ಪಕ್ಕದ ಕ್ಷೇತ್ರಗಳಲ್ಲೂ ಹೊರಗಿನವರು ಅಡಗಿದ್ದಾರೆ ಅಲ್ಲೂ ಅವರನ್ನು ಹುಡುಕಿ ಹೊರಗೆ ಅಟ್ಟಲಿ ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
ಇದೇ ವೇಳೆ ಮುನಿರತ್ನ ಪರ ದರ್ಶನ್ ಪ್ರಚಾರದ ವೇಳೆ ಸಾಮಾಜಿಕ ಅಂತರ ಇರಲ್ಲಿಲ್ಲ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅಶೋಕ್, ಬಿಜೆಪಿಯಿಂದ ಕೋವಿಡ್ ನಿಯಮಗಳ ಪಾಲನೆ ಆಗಿದೆ.
ಕಾಂಗ್ರೆಸ್ ನಿಂದ ನಿಯಮಗಳ ಉಲ್ಲಂಘನೆ ಆಗಿದೆ ಎಂದು ರಾಜಕೀಯ ಹೇಳಿಕೆ ನೀಡಿದರು.
ದರ್ಶನ್ ರ್ಯಾಲಿ ವೇಳೆ ನಾನೂ ಇದ್ದೆ, ದರ್ಶನ್ ಬಂದಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರು. ಅದಕ್ಕೂ ನಮಗೂ ಸಂಬಂಧ ಇಲ್ಲ, ನಮ್ಮ ಪಕ್ಷದಿಂದ ನೂರು ಜನ ಕಾರ್ಯಕರ್ತರು ಮಾತ್ರ ಬಂದಿದ್ದರು.
ಉಳಿದಂತೆ ಬಂದಿದ್ದ ಜನಕ್ಕೂ ನಮಗೂ ಸಂಬಂಧ ಇಲ್ಲ. ದರ್ಶನ್ ನಮ್ಮ ಪರ ಪ್ರಚಾರಕ್ಕೆ ಬಂದಿದ್ದರಿಂದ ಕಾಂಗ್ರೆಸ್ ನವರು ಭಯಭೀತರಾಗಿದ್ದಾರೆ ಹಾಗಾಗಿ ಇಂಥ ಆರೋಪ ಮಾಡಿದ್ದಾರೆ ಎಂದರು.
ಇದೇ ವೇಳೆ ಯಡಿಯೂರಪ್ಪ ಹೋದರೆ ಬಿಜೆಪಿಗೆ ಹೋದವರ ಪಾಡು ನಾಯಿಪಾಡು ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಅಶೋಕ್, ಈಗ ಕಾಂಗ್ರೆಸ್ ಪಾಡೇ ನಾಯಿಪಾಡಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರದ್ದು ನಾಯಿಪಾಡು : ಕಟೀಲ್ ವ್ಯಂಗ್ಯ
ಕಾಂಗ್ರೆಸ್ ನಿಂದ ಒಬ್ಬೊಬ್ಬರಾಗಿ ಆಚೆ ಹೋಗುತ್ತಿದ್ದಾರೆ. ಈ 15 ಜನರ ವಿಚಾರದಲ್ಲಿ ಕಾಂಗ್ರೆಸ್ ನವರು ಸರಿಯಾಗಿ ನಡೆದುಕೊಳ್ಳಲಿಲ್ಲ. ಹಾಗಾಗಿ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದರು.
ಕಾಂಗ್ರೆಸ್ ನಿಂದ ಇನ್ನೂ ಐವರು ಶಾಸಕರು ಆಚೆ ಬರುತ್ತಾರೆ. ಐವರು ಶಾಸಕರು ಕಾಂಗ್ರೆಸ್ ಬಿಡಲು ರೆಡಿ ಇದ್ದಾರೆ ಅವರನ್ನು ಮೊದಲು ಕಾಂಗ್ರೆಸ್ ನಾಯಕರು ತಡೆದಿಟ್ಟುಕೊಳ್ಳಲಿ ಎಂದು ಸಲಹೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel