‘ದಾಸ’ನ ಬೆಂಬಲಕ್ಕೆ ಬಂದ ಆಪ್ತ ಮಿತ್ರ – ಡಿ ಬಾಸ್ ಸಪೋರ್ಟ್ ಗೆ ನಿಂತ ಸೆಲೆಬ್ರಿಟಿಗಳು ಯಾರ್ಯಾರು..?
ನಟ ದರ್ಶನ್ ಅವರು ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಒಮ್ಮೆ 25 ಕೋಟಿ ವಂಚನೆ ಕೇಸ್ ನಲ್ಲಿ ಉಮಾಪತಿ ಅವರ ಜೊತೆಗೆ ಸುದ್ದಿಯಾದ್ರೆ , ಇದೀಗ ‘ಇಂದ್ರಜಾಲ’ದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ.. ಅಂದ್ರೆ ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋದಾಗಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದರ್ಶನ್ ಅವರು ಸುದ್ದಿಯಾಗ್ತಿದ್ದಾರೆ..
ಈ ನಡುವೆ ಡಿ ಬಾಸ್ ಪರ ಅಭಿಮಾನಿಗಳು , ಕೆಲ ಸೆಲೆಬ್ರಿಟಿಗಳು , ರಾಜಕಾರಣಿಗಳು ಬೆಂಬಲಕ್ಕೆ ನಿಂತಿದ್ದಾರೆ.. ಆದ್ರೆ ಹಲವರು ದರ್ಶನ್ ಅವರ ಹೇಳಿಕೆಗಳ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ.. ಇದೀಗ ದರ್ಶನ್ ಆಪ್ತ ಮಿತ್ರ , ಸ್ನೇಹಾನಾ – ಪ್ರೀತಿನಾ, ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಡಿ ಬಾಸ್ ಪರ ನಿಂತಿದ್ದಾರೆ.. ಈ ಬಗ್ಗೆ ಟ್ವೀಟ್ ಮಾಡಿರುವ ಆದಿತ್ಯ , ಇಂತಹ ಕಠಿಣ ಸಮಯದಲ್ಲಿ ನಿಮ್ಮೊಂದಿಗೆ ಯಾರು ನಿಲ್ಲುತ್ತಾರೋ ಅಥವಾ ನಿಲ್ಲುವುದಿಲ್ಲವೋ ನನಗೆ ಅದು ಬೇಕಾಗಿಲ್ಲ. ನಾನು ಎಂದಿಗೂ ನಿನ್ನ ಪರವಾಗಿ ಇರುತ್ತೇನೆ. ನಿಮ್ಮ ಸೆಲೆಬ್ರಿಟಿಗಳ ಬೆಂಬಲ ನಿಮಗಿದೆ ಎನ್ನುವುದು ನೆನಪಿಡಿ. ಲವ್ ಯೂ ದರ್ಶನ್ ತೂಗುದೀಪ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ಸದಾ ನಿಮ್ಮ ಜೊತೆ ಇರ್ತೇವೆ ಎಂದು ಹೇಳಿದ್ದಾರೆ.
ದರ್ಶನ್ ಹಲ್ಲೆ ಪ್ರಕರಣ – ಪದೇ ಪದೇ ದಲಿತ ಪದ ಬಳಸಿದ ಇಂದ್ರಜಿತ್ ಗೆ ಸಂಕಷ್ಟ ಶುರು..!
ಇನ್ನೂ ಇಲ್ಲಿಯವರೆಗೂ ಯುವ ನಟ ಧನ್ವೀರ್, ಶಿವರಾಜ್ ಕೆ ಆರ್ ಪೇಟೆ, ಸಂಸದ ಪಿಸಿ ಮೋಹನ್, ಸಚಿವ ಬಿಸಿ ಪಾಟೀಲ್, ಆಪ್ತ ಗೆಳೆಯ ವಿನೋದ್ ಪ್ರಭಾಕರ್ ಸೇರಿದಂತೆ ಅನೇಕರು ದಾಸನ ಪರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನ ಹಾಕಿ ಬೆಂಬಲಿಸಿದ್ದಾರೆ.. ನಟ ದರ್ಶನ್, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಕೆಲ ದಿನಗಳ ಹಿಂದೆ ಹೋಟೆಲ್ ಸಪ್ಲೈಯರ್ ಒಬ್ಬರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಇದಕ್ಕೆ ದರ್ಶನ್ ಖಾರವಾಗಿ ಉತ್ತರ ನೀಡಿದ್ದು, ಡಿ ಬಾಸ್ ಅಭಿಮಾನಿಗಳು ಸಹ ಇಂದ್ರಜಿತ್ ವಿರುದ್ಧ ಆಕ್ರೋಶಗೊಂಡಿದ್ದಾರೆ.