ಡಿ ಬಾಸ್ ವಿರುದ್ಧ ಬೇಸರ ಹೊರಹಾಕಿದ ರಕ್ಷಿತಾ..!
ಬೆಂಗಳೂರು: ನಟ ದರ್ಶನ್ ಅವರು ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಒಮ್ಮೆ 25 ಕೋಟಿ ವಂಚನೆ ಕೇಸ್ ನಲ್ಲಿ ಉಮಾಪತಿ ಅವರ ಜೊತೆಗೆ ಸುದ್ದಿಯಾದ್ರೆ , ಇದೀಗ ‘ಇಂದ್ರಜಾಲ’ದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ.. ಅಂದ್ರೆ ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರೋದಾಗಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ದರ್ಶನ್ ಅವರು ಸುದ್ದಿಯಾಗ್ತಿದ್ದಾರೆ..
ಈ ನಡುವೆ ಡಿ ಬಾಸ್ ಪರ ಅಭಿಮಾನಿಗಳು , ಕೆಲ ಸೆಲೆಬ್ರಿಟಿಗಳು , ರಾಜಕಾರಣಿಗಳು ಬೆಂಬಲಕ್ಕೆ ನಿಂತಿದ್ದಾರೆ.. ಆದ್ರೆ ಹಲವರು ದರ್ಶನ್ ಅವರ ಹೇಳಿಕೆಗಳ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ.. ಪ್ರಕರಣದ ನಡುವೆ ಹಲವರ ಹೆಸರುಗಳನ್ನ ತರಲಾಗ್ತಿರೀಓದು ಬೇಸರಕ್ಕೆ ಕಾರಣವಾಗಿದೆ.. ಇದೀಗ ಸ್ಯಾಂಡಲ್ ವುಡ್ ನಟಿ ರಕ್ಷಿತಾ (ಪ್ರೇಮ್ ಪತ್ನಿ ) ನಿರ್ದೇಶಕ , ನಟ ಪ್ರೇಮ್ ಹೆಸರನ್ನ ಮಧ್ಯೆ ಎಳೆತಂದಿರೋದಕ್ಕೆ ದರ್ಶನ್ ವಿರುದ್ಧ ಬೇಸರ ಹೊರಹಾಕಿದ್ದಾರೆ.. ಚಿತ್ರರಂಗ ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಲ್ಲ ಎಂದು ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ದರ್ಶನ್ ವಿಚಾರದಲ್ಲಿ ಪ್ರೇಮ್ ಹೆಸರು ಥಳುಕು ಹಾಕಿಕೊಂಡಿದ್ದಕ್ಕೆ ಪ್ರೇಮ್ ಇನ್ಸ್ಟಾಗ್ರಾಮ್ ಮೂಲಕ ಬೇಸರ ಹೊರಹಾಕಿದ ಬೆನ್ನಲ್ಲೇ ರಕ್ಷಿತಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ರಕ್ಷಿತಾ ಕೂಡ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. “ ಕನ್ನಡ ಚಿತ್ರರಂಗ ನಮ್ಮದು, ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ. ಎಲ್ಲರೂ ಸಮಾನರು. ಆದರೆ ಅವರವರ ಕೆಲಸವೇ ಅವರು ಏನೆಂಬುದನ್ನು ಗುರುತಿಸುತ್ತದೆ. ಇಲ್ಲಿ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ. ಹಾಗೆಯೇ ಎಲ್ಲರಿಗೂ ಗೌರ ಕೊಡುತ್ತೇವೆ. ಆದರೆ ಇಂತಹ ಘಟನೆಗಳು ನಡೆದಾಗ ಬೇಸರವಾಗುತ್ತದೆ. ಇಲ್ಲಿ ದುರದೃಷ್ಟಕರ ಕೆಲವೊಂದು ವಿಚಾರಗಳು ತೆರೆದುಕೊಳ್ಳುತ್ತಿರುವುದು ಮನಸ್ಸಿಗೆ ಬೇಸರವನ್ನು ಉಂಟುಮಾಡುತ್ತಿದೆ” ಎಂದಿದ್ದಾರೆ.. ಅಂದ್ಹಾಗೆ ಇದಕ್ಕೂ ಮುನ್ನ ಪ್ರೇಮ್ ಅವರು ಕೂಡ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಸುಧೀರ್ಘವಾಗಿ ಬರೆದು ಬೇಸರ ಹೊರಹಾಕಿದ್ದರು..
“ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ರವರು, ಅಂಬರೀಷ್ ರವರು, ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ.. ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ.. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು.. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮದ್ಯೆ ನನ್ ಹೆಸ್ರು ಯಾಕೆ.. ದರ್ಶನ್ ಅವ್ರೆ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ. Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ” ಎಂದು ಅಸಾಮಾಧಾನ ಹೊರಹಾಕಿದ್ದರು..