Darshan
ಇಂದು ‘ಕರಾಟೆ ಕಿಂಗ್ ‘ ಶಂಕರ್ ನಾಗ್ ಅವರ 66ನೇ ಹುಟ್ಟುಹಬ್ಬ. ಸಿನಿಮಾ ತಾರೆಯರು ರಾಜಕೀಯ ಮುಖಂಡರು ಶಂಕ್ರಣ್ಣನನ್ನ ನೆನೆಯುತ್ತಿದ್ದಾರೆ. ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ಸಚಿವ ಸಿಟಿ ರವಿ , ಜಗದೀಶ್ ಶೆಟ್ಟರ್, ಶಿವಕುಮಾರ್ ಉದಾಸಿ, ಡಿಸಿಎಂ ಅಶ್ವತ್ಥ್ ನಾರಾಯಣ್, ಶ್ರೀರಾಮುಲು ಸೇರಿದಂತೆ ಅನೇಕರು ಟ್ವಿಟ್ ಮಾಡಿದ್ದಾರೆ. ಅದರಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹ ಶಂಕರ್ ನಾಗ್ ಅವರನ್ನ, ಅವರ ಕೊಡುಗೆಯನ್ನ ಸ್ಮರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಶಂಕರ್ ನಾಗ್ ಫೋಟೋವನ್ನು ಶೇರ್ ಮಾಡಿ “ ನಿಜವಾದ ಲೆಜೆಂಡ್ ಗೆ ಎಂದಿಗೂ ಸಾವಿಲ್ಲ. ಅವರು ನೆನಪು ಯಾವಾಗಲು ಕನ್ನಡಿಗರ ಹೃದಯದಲ್ಲಿ ಹಸಿರಾಗೆ ಉಳಿದಿರುತ್ತೆ. ನಿಮ್ಮನ್ನು ಯಾವಾಗಲು ಮಿಸ್ ಮಾಡಿಕೊಳ್ಳುತ್ತೇವೆ. ಹುಟ್ಟುಹಬ್ಬದ ಶುಭಾಶಯಗಳು ಶಂಕ್ರಣ್ಣ” ಎಂದು ಟ್ವೀಟ್ ಮಾಡಿದ್ದಾರೆ.
ಶಂಕರಣ್ಣನ 66ನೇ ಹುಟ್ಟುಹಬ್ಬ : ‘ಆಟೋರಾಜ’ನ ನೆನೆದ ರಾಜಕೀಯ ಗಣ್ಯರು
Darshan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel