“ಇಂದ್ರಜಿತ್ ಗಂಡ್ಸಾಗಿದ್ರೆ ದಾಖಲೆ ರಿಲೀಸ್ ಮಾಡ್ಲಿ” : ದರ್ಶನ್ ಸವಾಲು
ಮೈಸೂರು : ಇಂದ್ರಜಿತ್ ಲಂಕೇಜ್ ಗಂಡಸಾಗಿದ್ರೆ, ಅವರು ಅಪ್ಪನಿಗೆ ಹುಟ್ಟಿದವರೇ ಆಗಿದ್ದರೆ ಅವರು ದಾಖಲೆ ರಿಲೀಸ್ ಮಾಡಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೇರ ಸವಾಲ್ ಹಾಕಿದ್ದಾರೆ.
ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಇಂದ್ರಜಿತ್ ಗಾಂಡುಗಿರಿ ಪದ ಬಳಕೆಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮ್ಮಪ್ಪ ಗಂಡು ಮಗ ಅಂತ ಹೆತ್ತು ಸಾಕಿದ್ದಾರೆ. ಇಂದ್ರಜಿತ್ ಅವರು ಎಷ್ಟು ಬೇಕಾದರೂ ದಾಖಲೆ ರಿಲೀಸ್ ಮಾಡಲಿ. ನಾನು ಕುರುಕ್ಷೇತ್ರ, ಮೆಜೆಸ್ಟಿಕ್ ಮಾಡೋಕೆ ಸಿದ್ಧ. ಜಿಂದ್ರಜಿತ್ ತಾಕತ್ ಇದ್ರೆ ಒಂದು ನಟ್ಟಿಗಿರುವ ಸಿನಿಮಾ ಮಾಡಲಿ. ಡ್ರಗ್ಸ್ ಕೇಸ್ ಏನಾಯ್ತು ಎಂದು ಪ್ರಶ್ನಿಸದರು.
ಇದೇ ವೇಳೆ ನಿರ್ಮಾಪಕ ಉಮಾಪತಿ ವಿರುದ್ಧ ಗುಡುಗಿದ ಅವರು, ನಾನು ಕೇರ್ ಮಾಡಲ್ಲ. ದೊಡ್ಮನೆ ಅನ್ನ ತಿಂದು ಬಂದಿರೋದು ನಾವು. ದೊಡ್ಮನೆಯಲ್ಲಿ ನಮ್ಮಪ್ಪ ಅನ್ನ ತಿಂದಿದ್ದಾರೆ. ನಾನು ಕೂಡ ದೊಡ್ಮನೆ ಕುಟುಂಬದಲ್ಲಿಯೇ ಬೆಳೆದಿದ್ದೇನೆ. ನಾನೇನು ಮರ್ಡರ್ ಮಾಡಿದ್ದೇನಾ. ಒಂದಕ್ಕೊಂದು ವಿವಾದಗಳು ಹುಟ್ಟುತ್ತಿವೆ. ರಾಜ್ ಕುಮಾರ್ ಕುಟುಂಬಕ್ಕೂ ಆಸ್ತಿ ವಿವಾದಕ್ಕೂ ಸಂಬಂಧವಿಲ್ಲ. ಉಮಾಪತಿ ಬೇಕುಂತಲೇ 25 ಕೋಟಿ ರೂ. ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಜೋಗಿ ಪ್ರೇಮ್ ಕಡೆಯಿಂದ ಉಮಾಪತಿ ಪರಿಚಯವಾಗಿದೆ. ಒಂದು ಸಿನಿಮಾ ಮಾಡೋಣ ಅಂತ ಹೇಳಿದ್ರು. ಉಮಾಪತಿ ಬಳಿ ನಾನು ಪ್ರಾಪರ್ಟಿ ಕೇಳಿಲ್ಲ. ಅವರಿಗೆ ನಾನು ಫೋನ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.