ಒಂದೇ ವೇದಿಕೆಯಲ್ಲಿ ಕಿಚ್ಚ-ದಚ್ಚು : `ಧ್ರುವಸರ್ಜಾ’ಗೆ ದಿಗ್ಗಜರು ಸಾಥ್..
ಬೆಂಗಳೂರು : ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಸಿನಿಮಾ ಪೊಗರು ಸಿನಿಮಾ ಲಾಂಚ್ ಗೆ ದಿಗ್ಗಜರು ಒಂದಾಗಲಿದ್ದಾರಾ..? ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್, ಚಂದನವನದ ಒಡೆಯ ಚಾಲೆಂಜಿಂಗ್ ಸ್ಟಾರ್ ಒಂದಾಗಿ ಪೊಗರು ಆಡಿಯೋ ಲಾಂಚ್ ಮಾಡಲಿದ್ದಾರಾ…? ಅನ್ನೋ ಪ್ರಶ್ನೆಗಳು ಸದ್ಯ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿವೆ..
ಇದಕ್ಕೆ ಕಾರಣ ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಇನ್ಸ್ ಸ್ಟಾ ಲೈವ್ ನಲ್ಲಿ ಹೇಳಿದ ಆ ಮಾತು..!
ನಿನ್ನೆ ಪೊಗರು ಸಿನಿಮಾದ ಆಡಿಯೋ ಲಾಂಚ್ ವಿಚಾರವಾಗಿ ಮಾಹಿತಿ ನೀಡಲು ಧ್ರುವ ಸರ್ಜಾ ಇನ್ಸ್ ಸ್ಟಾ ಗ್ರಾಂನಲ್ಲಿ ಲೈವ್ ಗೆ ಬಂದಿದ್ದರು. ಈ ವೇಳೆ ಫೆಬ್ರವರಿ 14 ಪ್ರೇಮಿಗಳ ದಿನದಂದು ದಾವಣಗೆರೆಯಲ್ಲಿ ಸಿನಿಮಾದ ಆಡಿಯೋ ಲಾಂಚ್ ಮಾಡಲಿದ್ದೇವೆ. ಸಿನಿಮಾ ಕುರಿತು ಸಾಕಷ್ಟು ಸಪ್ರ್ರೈಜ್ ಇರಲಿದೆ. ಹಲವು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಸೆಲೆಬ್ರಿಟಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
ಈ ಮಾತು ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದು, ಹಲವು ವರ್ಷಗಳಿಂದ ದೂರ ದೂರ ಇದ್ದ ಸ್ಟಾರ್ ಗಳು ಯಾರು.. ಅನ್ನೋ ಹುಡುಕುಟದಲ್ಲಿ ದರ್ಶನ್, ಸುದೀಪ್ ಹೆಸರು ಮುಂಜೂಣಿಯಲ್ಲಿ ಕೇಳಿಬಂದಿದೆ. ಯಾಕೆಂದ್ರೆ ಕಿಚ್ಚ ದಚ್ಚು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತುಂಬಾ ವರ್ಷಗಳೇ ಕಳೆದಿವೆ.
ಇನ್ನು ಅವರೇ ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಇದೆ. ಅದೇನಂದ್ರೆ ಸುದೀಪ್ ಹೇಳಿಕೇಳಿ ನಿರ್ದೇಶಕ ನಂದಕಿಶೋರ್ ಅವ್ರ ಆಪ್ತ ಸ್ನೇಹಿತ.
ಹೀಗಾಗಿ ನಂದಕಿಶೋರ್ ಗಾಗಿ ಸುದೀಪ್ ಬಂದೇ ಬರ್ತಾರೆ ಅನ್ನೋ ಮಾತಿದೆ. ಇನ್ನು ದರ್ಶನ್ ಕೂಡ ಧ್ರುರ್ವ ಸರ್ಜಾ ಅವರ ಆಪ್ತರಲ್ಲಿ ಒಬ್ಬರು. ಸದ್ಯ ದಚ್ಚು ಸರ್ಜಾರ ಅಣ್ಣನ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರೂ ಕೂಡ ಕಾರ್ಯಕ್ರಮಕ್ಕೆ ಬರ್ತಾರೆ ಅನ್ನೋ ಮಾತಿದೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಒಂದು ವೇಳೆ ಈ ಗಾಳಿ ಸುದ್ದಿ ನಿಜ ಆಗಿದ್ದೇಯಾದಲ್ಲಿ ಕಿರುತೆರೆ ಮತ್ತು ಸೋಶಿಯಲ್ ಮೀಡಿಯಾಗೆ ಬೆಂಕಿ ಬೀಳೋದಂತೂ ಗ್ಯಾರಂಟಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel