ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತಗಳು ಆರಂಭವಾಗಿದ್ದು, ಜಂಬೂಸವಾರಿಗೆ ಅರಣ್ಯ ಇಲಾಖೆ ಐದು ಆನೆಗಳನ್ನು ಅಂತಿಮಗೊಳಿಸಿದೆ.
ಈ ಬಾರಿ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿದ್ದು, ಈ ಬಾರಿ ಅಂಬಾರಿ ಆನೆಯಾಗಿ ಅಭಿಮನ್ಯು ಆಯ್ಕೆಯಾಗಿದ್ದಾನೆ.
ಇನ್ನೂ ಉಳಿದಂತೆ ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯ ಆನೆಗಳನ್ನು ಆಯ್ಕೆ ಮಾಡಲಾಗಿದೆ.
ಈಗಾಗಲೇ ಈ ಐದು ಆನೆಗಳನ್ನ ಕಾಡಿನಿಂದ ಕರೆತರಲು ಅನುಮತಿ ಕೂಡ ಸಿಕ್ಕಿದೆ.
ಸದ್ಯಕ್ಕೆ ಈ ಐದು ಆನೆಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರದಲ್ಲಿವೆ.
ಅಕ್ಟೋಬರ್ 1ಕ್ಕೆ ಮೈಸೂರಿನ ಅರಣ್ಯ ಭವನಕ್ಕೆ ಆನೆಗಳು ಬರಲಿದೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ








