ಕೊರೊನಾ ಭಯ : ತನ್ನ 5 ವರ್ಷದ ಮಗುವಿಗೆ 15 ಬಾರಿ ಚಾಕು ಇರಿದ ತಾಯಿ
ಲಂಡನ್ : ಇಡೀ ವಿಶ್ವ ಹಾಗೂ ದೇಶಾದ್ಯಂತ ಕೊರೊನಾ ಹಾವಳಿ ಸೃಷ್ಟಿಸಿರುವ ಆತಂಕ , ಜನರನ್ನ ಮಾನಸಿಕ ಖಿನ್ನತೆಗೆ ಒಳಪಡಿಸುತ್ತದೆ.. ಅನೇಕರು ಕುಟುಂಬಸ್ತರು ಆಪ್ತರನ್ನ ಕಳೆದುಕೊಂಡಿದ್ರೆ, ಇನ್ನೂ ಕೆಲವರು ಕೊರೊನಾ ಭಯದಲ್ಲೇ ಜೀವನ ನಡೆಸುತ್ತಿದ್ದಾರೆ.. ಈಗಾಗಲೇ ಇದೇ ಭಯದಿಂದ ಅದೆಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡಿರುವುದೂ ಇದೆ.. ಮತ್ತೊಂದೆಡೆ ಲಾಕ್ ಡೌನ್ ನಿಂದ ಮನೆಯಲ್ಲೇ ಇರುವ ಜನರಲ್ಲಿ ಮಾನಸಿಕ ಸಮಸ್ಯೆಗಳು , ಒತ್ತಡಗಳು ಸಹ ಕಂಡುಬರುತ್ತಿದೆ..
ಆದ್ರೆ ಲಂಡನ್ ನಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ ಎಲ್ಲರನ್ನ ಬೆಚ್ಚಿಬೀಳಿಸಿದೆ. ಹೌದು.. ಭಾರತೀಯ ಮೂಲದ ಸುತಾ ಶಿವನಂಥಮ್ ಎಂಬ ಮಹಿಳೆ ತನ್ನ 5 ವರ್ಷದ ಮಗಳನ್ನ ಅತ್ಯಂತ ಕ್ರೂರವಾಗಿ ಚಾಕುವಿನಿಂದ 15 ಬಾರಿ ಇರಿದು ಹತ್ಯೆ ಮಾಡಿದ್ದಾಳೆ. ಸುತಾಗೆ ಕೊರೊನಾ ಭಯ ಶುರುವಾಗಿತ್ತು. ಕೊರೊನಾದಿಂದ ತಾನು ಸಾಯ್ತೆನೆ ಎಂದು ಬಾವಿಸಿದ್ದಳಂತೆ.. ನನ್ನ ಸಾವಿನ ನಂತ್ರ ಮಗಳು ಅನಾಥಳಾಗ್ತಾಳೆಂಬ ಭಯಕ್ಕೆ ಸುತಾ ತನ್ನ ಮಗಳನ್ನ ಹತ್ಯೆ ಮಾಡಿದ್ದಾಳೆ. ನಂತ್ರ ತಾನೂ ಚಾಕು ಇರಿದುಕೊಂಡಿದ್ದಾಳೆ ಎನ್ನಲಾಗಿದೆ. ಕಡೆಗೆ ಇಬ್ಬರನ್ನು ನೆರೆಯವರು ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ. ಮಗು ಪ್ರಾಣ ಬಿಟ್ಟಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿರೋದಾಗಿ ವರದಿಯಾಗಿದೆ.. ಈ ಬಗ್ಗೆ ಆ ಮಹಿಳೆಯ ಪತಿ ಕೋರ್ಟ್ ನಲ್ಲಿ ಮಾತನಾಡಿದ್ದು, ತನ್ನ ಪತ್ನಿ ಕೊರೊನಾ ಆತಂಕದಿಂದ ಮಾನಸಿಕ ಸ್ಥಿರತೆ ಕಲೆದುಕೊಂಡಿದ್ದಳು ಎಂದು ಹೇಳಿದ್ದಾನೆ.
ಭಾರತೀಯ ಮಹಿಳೆಗೆ ‘ಸ್ಟುಪಿಡ್ ಇಂಡಿಯನ್ಸ್ ’ ಎಂದು ನಿಂದಿಸಿ ಜೈಲು ಪಾಲಾದ ಸಿಂಗಪುರದ ಮಹಿಳೆ..!