Davanagere : ಹಾಡಹಗಲೇ ಯುವತಿಯನ್ನ ಚುಚ್ಚಿ ಕೊಂದ ಪಾಗಲ್ ಪ್ರೇಮಿ…
ತಾನು ಪ್ರೀತಿಸಿದ ಯುವತಿ ಬೇರೊಬ್ಬ ಯುವಕಕೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಯುವತಿಯನ್ನ ನಡು ರಸ್ತೆಯಲ್ಲೇ ತಡೆದು ನಿಲ್ಲಿಸಿ ಹಾಡಹಗಲೆ ಮನಬಂದಂತೆ ಚುಚ್ಚಿ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಬಿ.ಜೆ ಬಡಾವಣೆಯ ಚರ್ಚ್ ಮುಂಭಾಗ ಯುವತಿಯನ್ನ ಕೊಂದಿರುವ ಪಾಗಲ್ ಪ್ರೇಮಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ.
ವಿನೋಭ ನಗರದ ನಿವಾಸಿಯಾಗಿರುವ ಯುವತಿ ಚಾಂದ್ ಸುಲ್ತಾನಾ ಎಂಕಾಂ ಮುಗಿಸಿ ಸಿ ಎ ತರಬೇತಿಗಾಗಿ ತೆರಿಗೆ ಸಲಹೆಗಾರರಾದ ಕೆ.ಮಹ್ಮದ್ ಭಾಷಾ ಬಳಿ ತರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿದ್ದ ಹುಡುಗನ ಜೊತೆ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.
ಇದೇ ಯುವತಿಯನ್ನ ಕೊಲೆ ಮಾಡಿ ಬಂಧಿತನಾಗಿರು ಸಾದತ್ ಆಲಿಯಾಸ್ ಚಾಂದ್ ಫೀರ್ ಮದುವೆಯಾಗಲು ಬಯಸಿದ್ದ. ಆದ್ರೆ ಕುಟುಂಬದವರು ನಿರಾಕರಿಸಿದ್ದರಿಂದ ಯುವತಿ ಸುಲ್ತಾನ ಬೇರೋಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದರಿಂದ ಕೋಪಗೊಂಡ ಸಾದತ್ ಮರುದಿನ ತನ್ನ ಪಾಡಿಗೆ ತಾನು ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನ ಮಾತನಾಡಬೇಕು ಎಂದು ನಿಲ್ಲಿಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
Davanagere : A man killed woman for reject love proposal