Davanagere | ರೀಲ್ಸ್ ಮಾಡಲು ಹೋಗಿ ಯುವಕರು ನೀರುಪಾಲು
ದಾವಣಗೆರೆ : ರೀಲ್ಸ್ ಮಾಡಲು ಹೋಗಿ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಗನಹಳ್ಳಿ ಚೆಕ್ ಡ್ಯಾಂ ಬಳಿ ನಡೆದಿದೆ.
25 ವರ್ಷದ ಪವನ್, 24 ವರ್ಷದ ಪ್ರಕಾಶ್ ಮೃತ ದುರ್ದೈವಿಗಳಾಗಿದ್ದಾರೆ.

ಇವರು ಸ್ನೇಹಿತರಾಗಿದ್ದು, ರೀಲ್ಸ್ ಮಾಡುವಾಗ ಪ್ರಕಾಶ್ ನೀರಿನಲ್ಲಿ ಬಿದ್ದಿದ್ದಾನೆ.
ಕೂಡಲೇ ಪ್ರಕಾಶ್ ನನ್ನು ರಕ್ಷಿಸಲು ಪವನ್ ಹೋಗಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ಹರಿಹರದ ರಾಘವೇಂದ್ರ ಮಠದ ಬಳಿ ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.