ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 6 ನೇ ದಿನದ ಅಪ್ಡೇಟ್ ಇಲ್ಲಿದೆ…
1 ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಯುರೋಪ್ ಒಕ್ಕೂಟದ (ಇಯು) ಸದಸ್ಯತ್ವ ಪಡೆಯಲು ತಕ್ಷಣ ಕರೆ ನೀಡಿದ್ದಾರೆ.
2 ಯುದ್ಧದಲ್ಲಿ ಸೇರಲು ಸಿದ್ಧವಿರುವ ಕೈದಿಗಳನ್ನು ಮಿಲಿಟರಿ ತರಬೇತಿಯೊಂದಿಗೆ ಬಿಡುಗಡೆ ಮಾಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಘೋಷಿಸಿದ್ದಾರೆ.
3 ಉಕ್ರೇನ್‌ನಲ್ಲಿ 94 ಜನರು ಸಾವನ್ನಪ್ಪಿದ್ದಾರೆ, ಕನಿಷ್ಠ 376 ನಾಗರಿಕರು ಗಾಯಗೊಂಡಿದ್ದಾರೆ ಎಂದು ಯುಎನ್ ಮಾನವ ಹಕ್ಕುಗಳ ಕಚೇರಿ ದೃಢಪಡಿಸಿದೆ.
4 ರಷ್ಯಾ ಸೇನೆ ಉಕ್ರೇನ್‌ನ ಬರ್ಡಿಯನ್ಸ್ಕ್ ಮತ್ತು ಎನರ್ಹೋಡರ್ ಎಂಬ ಎರಡು ನಗರಗಳನ್ನು ಆಕ್ರಮಿಸಿಕೊಂಡಿದೆ.
5 Airbnb ಮತ್ತು airbnb.org ಸುಮಾರು ಒಂದು ಲಕ್ಷ ಉಕ್ರೇನಿಯನ್ ನಿರಾಶ್ರಿತರಿಗೆ ಉಚಿತ ಮನೆಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ ಎಂದು Airbnb CEO ಹೇಳಿದ್ದಾರೆ.
6 ಇದುವರೆಗೆ ನಡೆದ ಹೋರಾಟದಲ್ಲಿ ಸುಮಾರು 5,300 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಸೇನೆಯು ಸುಮಾರು 151 ಟ್ಯಾಂಕ್‌ಗಳು, 29 ವಿಮಾನಗಳು ಮತ್ತು 29 ಹೆಲಿಕಾಪ್ಟರ್‌ಗಳನ್ನು ನಾಶಪಡಿಸಿದೆ ಎಂದಿದೆ ಉಕ್ರೇನಿಯನ್.
7 ಸೆಂಟ್ರಲ್ ಬ್ಯಾಂಕ್ ಆಫ್ ರಶಿಯಾ ಪ್ರಮುಖ ಬಡ್ಡಿದರವನ್ನು 20% ಗೆ ಹೆಚ್ಚಿಸಿದೆ. ರಷ್ಯಾದ ಸೆಕ್ಯುರಿಟಿಗಳನ್ನು ಮಾರಾಟ ಮಾಡಲು ವಿದೇಶಿ ಗ್ರಾಹಕರ ಬಿಡ್‌ಗಳನ್ನು ನಿಷೇಧಿಸಲು ಆದೇಶಿಸಿದೆ.
8 ಕೈವ್ ವಶಪಡಿಸಿಕೊಳ್ಳುವ ರಷ್ಯಾದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಕೈವ್ ಇನ್ನೂ ಉಕ್ರೇನ್‌ನ ಹಿಡಿತದಲ್ಲಿದೆ.
9 ಬೆಲಾರಸ್ ಗಡಿಯಲ್ಲಿ ರಷ್ಯಾ ಮತ್ತು ಉಕ್ರೇನ್ ಅಧಿಕಾರಿಗಳ ನಡುವೆ ಮಾತುಕತೆ ನಡೆಯಲಿದೆ.
10 ಉಕ್ರೇನ್ ವಿರುದ್ಧ ರಷ್ಯಾದ ದಾಳಿಯು ಐದನೇ ದಿನಕ್ಕೆ ಕಾಲಿಡುತ್ತಿದ್ದಂತೆ ರಷ್ಯಾದ ಪಡೆಗಳು ತಮ್ಮ ಆಕ್ರಮಣವನ್ನು ಕಡಿಮೆ ಮಾಡಿವೆ ಎಂದು ಉಕ್ರೇನಿಯನ್ ಮಿಲಿಟರಿ ಸೋಮವಾರ ಹೇಳಿದೆ.
11 ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮುಂದುವರೆಸುತ್ತಿದೆ. ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಆರ್‌ಕೆ ಸಿಂಗ್ ಅವರು ಕಾರ್ಯಾಚರಣೆಯನ್ನು ಸಂಘಟಿಸಲು ಮತ್ತು ವಿದ್ಯಾರ್ಥಿಗಳ ಸಹಾಯಕ್ಕಾಗಿ ಉಕ್ರೇನ್ ನ ನೆರೆಯ ದೇಶಗಳಿಗೆ ತೆರಳಲಿದ್ದಾರೆ.ಎಂದು ಮೂಲಗಳು ತಿಳಿಸಿವೆ.