ಕಾರಿನ ಟೈಯರ್ ಬದಲಿಸಿದ ಡಿಸಿ ರೋಹಿಣಿ ಸಿಂಧೂರಿ : ವಿಡಿಯೋ ವೈರಲ್

1 min read

ಕಾರಿನ ಟೈಯರ್ ಬದಲಿಸಿದ ಡಿಸಿ ರೋಹಿಣಿ ಸಿಂಧೂರಿ : ವಿಡಿಯೋ ವೈರಲ್

ಮೈಸೂರು : ಸರಳ ವ್ಯಕ್ತಿತ್ವ, ಆಡಳಿತ ವೈಖರಿಯಿಂದಲೇ ಜನರ ಮೆಚ್ಚುಗೆ ಪಾತ್ರರಾಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಇದೀಗ ಮತ್ತೊಮ್ಮೆ ಜನರ ಗಮನ ಸೆಳೆದಿದ್ದಾರೆ.

ಪ್ರಸ್ತುತ ಮೈಸೂರು ಜಿಲ್ಲಾಧಿಕಾರಿಯಾಗಿರುವ ಅವರು ರಸ್ತೆಯಲ್ಲಿ ತಮ್ಮ ಕಾರಿನ ಟೈರ್ ಬದಲಾಯಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಕುಟುಂಬದ ಜೊತೆ ರೋಹಿಣಿ ಸಿಂಧೂರಿ ಅವರು ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕಾರಿನ ಟೈರ್ ಪಂಕ್ಚರ್ ಆಗಿದೆ.

DC Rohini Sindhuri

ಆಗ ಸ್ವತಃ ರೋಹಿಣಿಯವರೆ ಕಾರಿನ ಟೈಯರ್ ಬದಲಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ರೋಹಿಣಿ ಸಿಂಧೂರಿಯವರು ಕಾರಿನ ಟೈರ್ ಕಳಚುತ್ತಿದ್ದು, ಇದನ್ನ ಗಮನಿಸಿದ ಸಾರ್ವಜನಿಕರು ತಾವು ರೋಹಿಣಿ ಸಿಂಧೂರಿ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಡಿಸಿ ರೋಹಿಣಿ ಸಿಂಧೂರಿ ಅವರು ನಕ್ಕು ಸುಮ್ಮನಾಗಿ ಮತ್ತೆ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd