ಬೀದರ್: ಜನಪ್ರತಿನಿಧಿಗಳಿಗೆ ಸರ್ಕಾರದ ನಿಯಮ ಕಾಲಿನ ಕಸಕ್ಕೆ ಸಮಾನ ಎಂಬುದಕ್ಕೆ ದಿವಂಗತ ಅಪ್ಪನ ಹುಟ್ಟುಹಬ್ಬ ಆಚರಣೆ ವೇಳೆ ಮಗ ಹಾಗೂ ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊರೊನಾ ನಿಯಮ ಉಲ್ಲಂಘಿಸಿ ಮೈಮರೆತು ಕುಣಿದು ಕುಪ್ಪಳಿಸಿದ ಘಟನೆ ಭಾರೀ ಟೀಕೆಗೆ ಗುರಿಯಾಗಿದೆ.
ಮಾಜಿ ಸಚಿವರೂ ಆಗಿದ್ದ ದಿ. ಗುರುಪಾದಪ್ಪ ನಾಗಮಾರಪಲ್ಲಿ ಅವರ ಹುಟ್ಟುಹಬ್ಬವನ್ನು ಗುರುವಾರ ಆಚರಿಸಬೇಕಿತ್ತು. ಆದರೆ, ಬೀದರ್ ಡಿಸಿಸಿ ಬ್ಯಾಂಕ್ ವತಿಯಿಂದ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಬುಧವಾರ ರಾತ್ರಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ದಿ.ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಉಮಾಕಾಂತ ನಾಗಮಾರಪಲ್ಲಿ ಪಾಲ್ಗೊಂಡಿದ್ದರು.
ಆದರೆ, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅಲ್ಲಿಗೆ ಬಂದಿದ್ದ ಜನರನ್ನು ಸೇರಿಸಿಕೊಂಡು ರಾತ್ರಿ ವೇಳೆ ಡಿ.ಜೆ ಸಾಂಗ್ ಗೆ ಅಧ್ಯಕ್ಷ ಉಮಾಕಾಂತ ನಾಗಮಾರಪಲ್ಲಿ ಹಾಗೂ ಇತರರು ಸ್ಟೆಪ್ ಹಾಕಿದ್ದಾರೆ. ಮಧ್ಯರಾತ್ರಿ ಜನರ ಗುಂಪು ಸೇರಿಸಿಕೊಂಡು ಕುಣಿದು ಕುಪಳ್ಳಿಸುವ ಮೂಲಕ ಉಮಾಕಾಂತ್ ನಾಗಮಾರಪಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ.
ಕಾರ್ಯಕ್ರಮದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ತನ್ನ ತಂದೆಯ ಹುಟ್ಟುಹಬ್ಬ ಆಚರಣೆ ಹೀಗೆ ಬಳಸಿಕೊಂಡಿರುವುದು, ಅದರಲ್ಲೂ ರಾಜ್ಯದ ಪ್ರಭಾವಿ ನಾಯಕರಾಗಿ ಬೆಳೆದಿದ್ದ ನಾಯಕರ ಹುಟ್ಟುಹಬ್ಬವನ್ನು ಮಗನೇ ಡಿ.ಜೆ ಹಾಕಿಸಿಕೊಂಡು ಕುಣಿದು ಕುಪ್ಪಳಿಸುವುದು ಎಷ್ಟರ ಮಟ್ಟಿಗೆ ಸರಿ. ಹಾಗೆಯೇ ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಸ್ಥಾನದಂತಹ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯೇ ಹೀಗೆ ನಡೆದುಕೊಂಡಿರುವುದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel