Bengaluru : DCP ಕಾರಿನ ಮೇಲೆ ಮುರಿದು ಬಿದ್ದ ಬೃಹತ್ ಕೊಂಬೆ
ಬೆಂಗಳೂರಿನ ಜಯನಗರದ ದಕ್ಷಿಣ ವಿಭಾಗ ಡಿಸಿಪಿ ಕಚೇರಿಯ ಆವರಣದಲ್ಲಿ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಡಿಸಿಪಿ ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.
ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣ ಕಾಂತ್ ಆಗಷ್ಟೆ ಇನ್ನೋವಾ ಕಾರಿನಿಂದ ಇಳಿದು ಕಚೇರಿಗೆ ತೆರಳಿದ 5 ನಿಮಿಷದ ಬಳಿಕ ಕೊಂಬೆ ಬಿದ್ದಿದೆ.
ಡಿಸಿಪಿಯವರು ಇಳಿದ ಬಳಿಕ ಚಾಲಕ ಕಾರಿನಲ್ಲೇ ಕುಳಿತಿದ್ದರು. ಈ ವೇಳೆ ಮೊಬೈಲಿಗೆ ಕರೆ ಬಂದಿದೆ. ಕರೆ ಬಂದ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದು ಹೊರ ಬಂದು ಮಾತನಾಡುತ್ತಿದ್ದಾಗ ಘಟನೆ ನಡೆದಿದೆ.
ಕೊಂಬೆ ಚಾಲಕ ಕುಳಿತಿದ್ದ ಸ್ಥಳದ ಮೇಲೆ ಬಿದ್ದಿದೆ. ಒಂದು ವೇಳೆ ಚಾಲಕ ಕಾರಿನಲ್ಲಿ ಇದ್ದಿದ್ದರೆ ಗಂಭೀರವಾದ ಗಾಯಗಳಾಗುವ ಸಾಧ್ಯತೆ ಇತ್ತು.
DCP’s car was damaged by a huge tree branch falling on the premises of South Division DCP office in Jayanagar, Bengaluru.