ಸತತ ಸೋಲುಗಳಿಂದ ಟೂರ್ನಿಯಿಂದಲೇ ಹೊರ ಬೀಳುವ ಭೀತಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಡು ಆರ್ ಡೈ ಪಂದ್ಯದದಲ್ಲಿ ಕೋಲ್ಕತ್ತಾ ನೈಟ್ರೈಡರ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ತಂಡ ಈ ಬಾರಿ ಹೀನಾಯ ಪ್ರದರ್ಶನ ನೀಡಿದೆ. ಓಪನರ್ ಪೃಥ್ವಿ ಶಾ ತಲೆದಂಡವಾಗುವ ಸಾಧ್ಯತೆ ಇದ್ದು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನದಿಂದ ಕೂಡಿದೆ. ಪೃಥ್ವಿ ಶಾ 5 ಇನ್ನಿಂಗ್ಸ್ಗಳಿಂದ 34 ರನ್ ಕಲೆ ಹಾಕಿದ್ದಾರೆ. 15 ರನ್ ಅತಿ ಹೆಚ್ಚು ರನ್ ಆಗಿದೆ. ಇಂದು ತವರು ಅಂಗಳದಲ್ಲಿ ಡೆಲ್ಲಿ ತಂಡದ ಹಣೆಬರಹ ನಿರ್ಧಾರವಾಗಲಿದೆ.
ಸರ್ಫಾರಾಜ್ ಖಾನ್ ಇಂದಿನ ಪಂದ್ಯದಲ್ಲಿ ಆರಂಭಿಕರಾಗಿ ಮನೀಶ್ ಪಾಂಡೆ ಜತೆ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಇಂದಿನ ಪಂದ್ಯ ವಾರ್ನರ್ ಪಡೆಗೆ ಗೆಲ್ಲಲ್ಲೇಬೇಕಾದ ಪಂದ್ಯವಾಗಿದೆ.
ಇನ್ನು ಕೋಲ್ಕತ್ತಾ ತಂಡ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋಲನ್ನು ಮರೆಯಬೇಕಿದೆ. ನಾಯಕ ನಿತೀಶ್ ರಾಣಾ ರಿಂಕು ಸಿಂಗ್ ಮತ್ತು ಸೋಟಕ ಬ್ಯಾಟರ್ ಆ್ಯಂಡ್ರೆ ರಸೆಲ್ ಡೆಲ್ಲಿ ಬೌಲರ್ಗಳಾದ ಆ್ಯನಿರಿಟ್ಜ್ ನೋಟ್ರ್ಜೆ ಮತ್ತು ಮುಸ್ತಾಫಿಜುರ್ ರೆಹಮಾನ್ ಎದುರಿಸಲು ಸಜ್ಜಾಗಿದ್ದಾರೆ.
ಐದು ಸೋಲಿಗೆ ಡೆಲ್ಲಿ ತಂಡದ ಬ್ಯಾಟಿಂಗ್ ವೈಫಲ್ಯವೇ ಕಾರಣವಾಗಿದೆ. ಪೃಥ್ವಿ ಶಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನು ನಾಯಕ ಡೇವಿಡ್ ವಾರ್ನರ್ ನಿಧಾನಗತಿಯ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ವಾರ್ನರ್ 5 ಪಂದ್ಯಗಳಿಂದ 228 ರನ್ ಹೊಡೆದಿದ್ದು 116 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಮೂರನೆ ಕ್ರಮಾಂಕದಲ್ಲಿ ಮಿಚೆಲ್ ಮಾರ್ಷ್ ವೈಫಲ್ಯ ಅನುಭವಿಸಿದ್ದಾರೆ. ರೀಲಿ ರೂಸೌವ್ ಮತ್ತು ರೊವಮನ್ ಪೊವೆಲ್ ಹೇಳಿಕೊಳ್ಳುವಂತಹ ಪ್ರದರ್ಶನ ಕೊಟ್ಟಿಲ್ಲ.
ಯಶ್ ಧೂಲ್ ತಾಂತ್ರಿಕಾ ವೈಫಲ್ಯ ಅನುಭವಿಸುತ್ತಿದ್ದಾರೆ. ಆಫ್ ಸ್ಟಂಪ್ನತ್ತ ಬಂದ ಚೆಂಡನ್ನು ಎದುರಿಸುವಲ್ಲಿ ವಿಫಲರಾಗಿದ್ದಾರೆ.
ಇನ್ನು ಕೋಲ್ಕತ್ತಾ ತಂಡದಲ್ಲಿ ರೆಹಾಮನ್ಹುಲ್ಲಾ ಗುರ್ಬಾಜ್ ಬದಲು ಜಾಸನ್ ರಾಯ್ ಜಗದೀಶನ್ ಜೊತೆ ಆರಂಭಿಕರಾಗಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ.
ಇಂದಿನ ಪಂದ್ಯದಲ್ಲಿ ಎಲ್ಲರ ಗಮನ ನಾಯಕ ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಮೇಲಿದೆ. ರಸೆಲ್ ಅವರಿಂದಲೂ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ, ಕಳೆದ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಶತಕ ಸಿಡಿಸಿ ಅಬ್ಬರಿಸಿದ್ದರು.








