ತಂಪು ಪಾನೀಯಗಳಿಂದ ಮಾರಕ ಕ್ಯಾನ್ಸರ್ ಬರಬಹುದು ಎಂದು ವರದಿಯೊಂದು ಹೇಳಿದೆ. ಇಂದಿನ ದಿನಮಾನಗಳಲ್ಲಿ ಹಲವರು ಪ್ರತಿ ದಿನ ಕೋಲ್ಡ್ ಡ್ರಿಂಕ್ ಸೇವನೆಮ ಮಾಡುವ ಅಭ್ಯಾಸ ರೂಢಿ ಮಾಡಿಕೊಂಡಿದ್ದಾರೆ. ಆದರೆ, ಈ ಹವ್ಯಾಸ ಕ್ಯಾನ್ಸರ್ ರೋಗಿಯನ್ನಾಗಿ ಮಾಡಬಹುದು ಎಂದು ವರದಿಯೊಂದು ಹೇಳಿದೆ.
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿದೆ. ಈ ಅಧ್ಯಯನದ ಪ್ರಕಾರ ಕೋಕಾ ಕೋಲಾ, ಚೂಯಿಂಗ್ ಗಮ್ ಸೇರಿದಂತೆ ಇನ್ನಿತರ ತಂಪು ಪಾನೀಯಗಳಲ್ಲಿ ಬಳಸುವ ಕೃತಕ ಸಿಹಿಕಾರಕ ಆಸ್ಪರ್ಟೇಮ್ ನಿಂದ ಕ್ಯಾನ್ಸರ್ ಸಂಭವಿಸಬಹುದು ಎಂದು ಹೇಳಿದೆ.
ಸಾಮಾನ್ಯ ತಂಪು ಪಾನೀಯಗಳಲ್ಲಿ ಸಕ್ಕರೆಯನ್ನು ಸಿಹಿಗಾಗಿ ಬಳಸಲಾಗುತ್ತದೆ. ಆದರೆ, ಇನ್ನೊಂದು ಬಗೆಯ ಕೋಲ್ಡ್ ಡ್ರಿಂಕ್ ನಲ್ಲಿ ಸಕ್ಕರೆಯ ಬದಲಿಗೆ ಕೃತಕ ಸಿಹಿಕಾರಕವನ್ನು ಬಳಸಲಾಗುತ್ತದೆ. ಈ ಕೃತಕ ಸಿಹಿಕಾರಕಗಳು ಕ್ಯಾನ್ಸರ್ ಗೆ ಕಾರಣವಾಗಬಹುದು. ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಿಕವನ್ನು ತಂಪು ಪಾನೀಯ ಮತ್ತು ಚೂಯಿಂಗ್ ಗಮ್ ನಲ್ಲಿ ಬಳಸಲಾಗುತ್ತದೆ. ಇದು ಮಿಥೈಲ್ ಎಸ್ಟರ್ ಎಂಬ ಸಾವಯವ ಸಂಯುಕ್ತವಾಗಿದೆ. ಇದು ಸಕ್ಕರೆಗಿಂತಲೂ 200 ಪಟ್ಟು ಸಿಹಿಯಾಗಿರುತ್ತದೆ.
ಆಸ್ಪರ್ಟೇಮ್ ಶೇ. 95ರಷ್ಟು ಸಕ್ಕರೆ ಮುಕ್ತ ಸಾಫ್ಟ್ ಡ್ರಿಂಕ್ ಉದ್ಯಮದಲ್ಲಿ ಬಳಸಲಾಗುತ್ತದೆ. ಅಲ್ಲದೇ, ಶುಗರ್ ಫ್ರೀ ಮಾತ್ರೆಗಳು ಹಾಗೂ ಪೌಡರ್ ಗಳಲ್ಲಿ ಕೂಡ ಶೇ. 97ರಷ್ಟು ಆಸ್ಪರ್ಟೇಮ್ ಬಳಸಲಾಗುತ್ತದೆ. ಹೀಗಾಗಿ ಶುಗರ್ ಫ್ರೀ ತಂಪು ಪಾನೀಯಗಳು ಕೂಡ ಅಪಾಯಕಾರಿ. ಹೀಗಾಗಿಯೇ ವಿಶ್ವ ಆರೋಗ್ಯ ಸಂಸ್ಥೆಯ ಅದರ ಬಳಕೆಯನ್ನು ಅಪಾಯಕಾರಿ ಎಂದು ಹೇಳಿದೆ.







![pandavapura-free-health-camp-darshan-puttannaiah-october-8]](https://saakshatv.com/wp-content/uploads/2026/10/darsan-350x250.png)
