ಮೆಕ್ಸಿಕೋದಲ್ಲಿ 7.6 ತೀವ್ರತೆಯ ಮಾರಣಾಂತಿಕ ಭೂಕಂಪ
ಸೋಮವಾರ ಮೆಕ್ಸಿಕೊದ ಮಧ್ಯ ಪೆಸಿಫಿಕ್ ಕರಾವಳಿಯಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪ್ರಕೃತಿ ವಿಕೋಪದಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ. ಭಾರೀ ಭೂಕಂಪನದ ನಂತರ ಮೆಕ್ಸಿಕೋದಲ್ಲಿ ಕಟ್ಟಡಗಳೆಲ್ಲವೂ ವಾಲಾಡುತ್ತಿವೆ. ಮೆಕ್ಸಿಕೋದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
Breaking- Powerful 7.6 magnitude earthquake strikes Mexico.
Yesterday, an #earthquake is in Taiwan. Continuous earthquakes happening around the world. pic.twitter.com/rletjtWQwR
— World Updates Live (@itswpceo) September 19, 2022
ಸ್ಥಳೀಯ ಕಾಲಮಾನ ಮಧ್ಯಾಹ್ನ 1:05 ಕ್ಕೆ ಸಂಭವಿಸಿದ ಭೂಕಂಪದಿಂದ ಕಟ್ಟಡಗಳಿಗೆ ಹಾನಿಯಾದ ಬಗ್ಗೆ ಆರಂಭಿಕ ವರದಿಗಳು ಬಂದಿವೆ. 7.5 ರ ತೀವ್ರತೆಯಲ್ಲಿ ಭೂಕಂಪವು ಅಕ್ವಿಲಾದಿಂದ ಆಗ್ನೇಯಕ್ಕೆ 37 ಕಿಲೋಮೀಟರ್ (23 ಮೈಲುಗಳು) ಕೊಲಿಮಾ ಮತ್ತು ಮೈಕೋವಾಕನ್ ರಾಜ್ಯಗಳ ಗಡಿಯ ಬಳಿ ಮತ್ತು 15.1 ಕಿಲೋಮೀಟರ್ (9.4 ಮೈಲುಗಳು) ಆಳದಲ್ಲಿ ಭೂಕಂಪನವಾಗಿದೆ.
Earthquake in Mexico 🇲🇽😳#EarthQuake #Earth #Weather pic.twitter.com/vYnqJ0lCkD
— Whilly Bermudez (@WhillyBermudez) September 20, 2022
ಮೆಕ್ಸಿಕೋದ ರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆಯು ಮೆಕ್ಸಿಕೋದಲ್ಲಿನ ಸುನಾಮಿಯ ಐತಿಹಾಸಿಕ ದತ್ತಾಂಶವನ್ನು ಆಧರಿಸಿ, ಅಧಿಕೇಂದ್ರದ ಸಮೀಪವಿರುವ ಕರಾವಳಿ ನೀರಿನ ಮಟ್ಟದಲ್ಲಿ 32 ಇಂಚುಗಳಷ್ಟು (82 cm) ವ್ಯತ್ಯಾಸಗಳು ಕಾಣಬಹುದು ಎಂದು ಹೇಳಿದೆ.
Houses shake following an #earthquake in #mexico #sismo #tsunami #mexico #earthquake #michoacan #MexicoCity pic.twitter.com/56ml71Hqbx
— Internet Clips 📸 (@intxrnetclips) September 19, 2022