ಬಳ್ಳಾರಿಯಲ್ಲಿ ಬಾಣಂತಿಯರು (Ballari Maternal Death Case) ಸಾವನ್ನಪ್ಪಿರುವ ಪ್ರಕರಣ ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಬಾಣಂತಿಯರ ಕುಟುಂಬಗಳಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಬಳ್ಳಾರಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬೆಳಗಾವಿಯಲ್ಲಿನ ಪ್ರಕರಣಗಳು ಕೂಡ ಬೆಳಕಿಗೆ ಬಂದಿದ್ದವು. ಬೆಳಗಾವಿಯ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಕೇವಲ ಆರೇ ತಿಂಗಳಲ್ಲಿ 322 ಶಿಶುಗಳು ಹಾಗೂ 29 ಬಾಣಂತಿಯರು ಸಾವನ್ನಪ್ಪಿರುವ ಸಂಗತಿ ವರದಿಯಾಗಿದೆ. ಅಲ್ಲಿನ ಜಿಲ್ಲಾಸ್ಪತ್ರೆಯೊಂದರಲ್ಲೇ 172 ಶಿಶುಗಳು ಮಾರಣಹೋಮವಾಗಿದೆ. ಪ್ರತಿ ತಿಂಗಳು ಸರಾಸರಿ 20ರಿಂದ 25 ಮಕ್ಕಳು ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿವೆ. ಅಪೌಷ್ಠಿಕತೆಯಿಂದ ಸಾವುಗಳಾಗಿದೆ ಎಂದಿದ್ದಾರೆ.
322 ಮಕ್ಕಳು ಮೃತಪಟ್ಟಿರುವುದು ದೊಡ್ಡ ದುರಂತ. ಈ ಕುರಿತು ತನಿಖೆ ನಡೆಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.