Tumakur | ಕಂದನನ್ನ ಬಲಿ ಪಡೆದ ಮುಚ್ಚಿಟ್ಟಿದ್ದ ರಹಸ್ಯ!
2 ವರ್ಷದ ಮೊಮ್ಮಗಳನ್ನು ಬಲಿ ಪಡೆದ ಅತ್ತೆ
ಸೊಸೆ ಮೇಲಿನ ಕೋಪಕ್ಕೆ ಮೊಮ್ಮಗಳು ಸಾವು
ಕುಣಿಗಲ್ ತಾಲೂಕಿನ ಸಾಸಲು ಗ್ರಾಮದಲ್ಲಿ ಘಟನೆ
ಎರಡು ವರ್ಷದ ಪುಟಾಣಿ ತ್ರಿಷಾ ಮೃತಪಟ್ಟ ಮಗು
ತುಮಕೂರು : ಸೊಸೆ ಮೇಲಿನ ಕೋಪಕ್ಕೆ ಅತ್ತೆ ಮುಚ್ಚಿಟ್ಟ ರಹಸ್ಯ 2 ವರ್ಷದ ಮಗುವನ್ನ ಬಲಿ ಪಡೆದಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ.
2 ವರ್ಷದ ಪುಟಾಣಿ ತ್ರಿಷಾ ಮೃತಪಟ್ಟ ಮಗುವಾಗಿದೆ. ಈ ಮಗು ಹುಚ್ಚು ನಾಯಿ ಕಡಿತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಕಳೆದ ಒಂದು ತಿಂಗಳ ಹಿಂದೆ ತ್ರಿಷಾಳ ಅಜ್ಜಿ ಜಯಮ್ಮ, ಹಸು ಮೇಯಿಸಲು ತೋಟದ ಬಳಿ ಹೋಗಿದ್ದರು.
ಆಗ ತನ್ನ ಜೊತೆ ಮೊಮ್ಮಗಳನ್ನ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಹುಚ್ಚು ನಾಯಿಯೊಂದು ಹಸು ಹಾಗೂ ಮಗುವಿಗೆ ಕಚ್ಚಿದೆ.
ಆದರೆ ಸೊಸೆ ಮೇಲಿನ ಕೋಪದಿಂದ ಈ ವಿಚಾರವನ್ನು ಜಯಮ್ಮ ಯಾರಿಗೂ ಹೇಳದೇ ಮುಚ್ಚಿಟ್ಟಿದ್ದರು.
ಇತ್ತ ನಾಯಿ ಕಡಿತದಿಂದ ಹಸು ಮೂರೇ ದಿನಕ್ಕೆ ಮೃತಪಟ್ಟಿತ್ತು. ಇನ್ನೊಂದೆಡೆ ಮಗು ತ್ರಿಷಾ ಕೂಡ ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದಳು.
ಇದರಿಂದ ಗಾಬರಿಗೊಂಡು ತ್ರಿಷಾಳ ಪೋಷಕರು ವೈದ್ಯರನ್ನ ಸಂಪರ್ಕಿಸಿದ್ದಾಗ, ಮಗುವಿಗೆ ಯಾವುದೋ ಬೆಕ್ಕು, ಇಲ್ಲ ನಾಯಿ ಕಚ್ಚಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು.
ಇನ್ನು ಮಗುವಿನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜಯಮ್ಮ ಹುಚ್ಚು ನಾಯಿ ಕಡಿದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. Death of a 2 year old baby in tumakuru because of a hidden secret