ಹಾವೇರಿ haveri | ಹಾವು ಕಚ್ಚಿ ರೈತ ಸಾವು
ಹಾವೇರಿ : ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ರೈತ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
45 ವರ್ಷದ ಹಾಲಪ್ಪ ಕಲ್ಯಾಣಪ್ಪ ಬಂಕಾಪುರ ಮೃತ ರೈತನಾಗಿದ್ದಾರೆ.
ಜೋಡಿ ಕೊಲೆಗೆ ಬೆಚ್ಚಿಬಿದ್ದ ಹಾವೇರಿ
ಜಮೀನನಲ್ಲಿ ಮೆಕ್ಕೆಜೋಳದ ಮೇವು ತೆಗೆಯುತ್ತಿದ್ದ ವೇಳೆ ಹಾಲಪ್ಪ ಅವರಿಗೆ ಹಾವು ಕಚ್ಚಿದೆ.
ಕೂಡಲೇ ಅವರನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿಕ್ಕೋಡಿ | ಬಾವಿಗೆ ಬಿದ್ದ ಮೊಸಳೆ ರಕ್ಷಣೆ
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದು, ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.