ನದಿಯಲ್ಲಿ ಮುಳುಗಿ ಮೂವರು ಅಪ್ರಾಪ್ತ ಮಕ್ಕಳ ಸಾವು
ಗುಜರಾತ್: ತಾಪಿ ನದಿಯಲ್ಲಿ ಮುಳುಗಿ ಮೂವರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿರುವ ಘಟನೆ ಸೂರತ್ನ ರಾಂಡರ್ ಪ್ರದೇಶದಲ್ಲಿ ನಡೆದಿದೆ.
ಇಕ್ಬಾಲ್ ನಗರದ ಮೊಹಮ್ಮದ್ ಫಕೀರ್(7), ಶಹದತ್ ಫಕೀರ್(8) ಹಾಗೂ ಸಾನಿಯಾ(14) ಮೃತ ದುರ್ದೈವಿಗಳು. ಮಕ್ಕಳು ನಿನ್ನೆ ಸಂಜೆ ಆಟವಾಡ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಮೊಹಮ್ಮದ್ ಹಾಗೂ ಶಹದತ್ ಮೃತದೇಹಗಳನ್ನ ನಿನ್ನೆ ಹೊರತೆಗೆಯಲಾಗಿದ್ದು, ಸಾನಿಯಾ ಮೃತದೇಹವನ್ನ ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಹೊರತೆಗೆದಿದ್ದಾರೆ.
ನದಿ ದಡದಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಅರಬ್ಬಿ ಸಮುದ್ರದಲ್ಲಿ ಏಕಾಏಕಿ ಏರಿಳಿತವಾಗಿರುವ ಕಾರಣ, ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಕಂಡು ಬಂದಿದೆ. ಹೀಗಾಗಿ, ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.








