ಚೆಕ್ ಡ್ಯಾಂಗೆ ಇಳಿದ ಇಬ್ಬರು ನೀರುಪಾಲು chitradurga saaksha tv
ಚಿತ್ರದುರ್ಗ : ಚೆಕ್ ಡ್ಯಾಮ್ ಗೆ ಇಳಿದ ಇಬ್ಬರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಾಲಿಗೊಂಡನ ಹಳ್ಳಿಯಲ್ಲಿ ನಡೆದಿದೆ.
ಚಳ್ಳಕೆರೆ ಸೂಜಿಮಲ್ಲೇಶ್ವರ ನಗರದ ಮಂಜುನಾಥ್ (35), ಮನಿಷಾ (8) ಮೃತರು.
ಈ ಇಬ್ಬರು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಚೆಕ್ ಡ್ಯಾಗೆ ಈಜಲು ಹೋಗಿದ್ದರು.
ಈ ವೇಳೆ ಈಜಲಾಗದೇ ನೀರುಪಾಲಾಗಿದ್ದಾರೆ.
ಸದ್ಯ ಮಂಜುನಾಥ್ ಮೃತ ದೇಹ ಸಿಕ್ಕಿದ್ದು, ಮನಿಷಾ ಮೃತ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಶಾಸಕ ಟಿ. ರಘುಮೂರ್ತಿ, ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಭೇಟಿ ನೀಡಿದ್ದಾರೆ.









