ಇಂಡೋ-ಕಿವೀಸ್ ಕಾಳಗದಲ್ಲಿ ದೃಷ್ಟಿಯುದ್ಧ
ಜೈಪುರ : ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ.
ಕೊನೆ ಓವರ್ ನಲ್ಲಿ ರಿಷಬ್ ಪಂತ್ ಬೌಂಡರಿ ಸಿಡಿಸುವ ಮೂಲಕ ಮೂರು ಮ್ಯಾಚ್ ಗಳ ಟಿ20 ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ.
ಈ ಮಧ್ಯೆ ಪಂದ್ಯದ ವೇಳೆ ಭಾರತ ತಂಡದ ಬೌಲರ್ ದೀಪಕ್ ಚಹರ್ ಮತ್ತು ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ನಡುವೆ ದೃಷ್ಟಿ ಯುದ್ಧ ನಡೆದಿದೆ. ಇದು ಪಂದ್ಯದ ಕಿಚ್ಚು ಹೆಚ್ಚಿಸಿತು.
ಹೌದು..! ನಿನ್ನೆಯ ಪಂದ್ಯದಲ್ಲಿ ಕಿವೀಸ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅಬ್ಬರಿಸಿ ಬೊಬ್ಬರಿದರು.
ಆರಂಭದಿಂದಲೂ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿಕೊಂಡು ಬಂದ ಗಪ್ಟಿಲ್ ಕೊನೆಯ ಓವರ್ ಗಳಲ್ಲಿ ಬೌಂಡರಿ ಸಿಕ್ಸರ್ ಗಳು ಸುರಿಮಳೆ ಗೈದರು.
ಈ ವೇಳೆ 17ನೇ ಓವರ್ ಸೆಳೆಯಲು ಬಂದ ದೀಪಕ್ ಚಹರ್ ಅವರ ಮೊದಲ ಎಸೆತವನ್ನೇ ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಗಟ್ಟಿ ಚಹರ್ರನ್ನು ದುರುಗುಟ್ಟಿ ನೋಡಿದರು.
ಆಗ ಸುಮ್ಮನಿದ್ದ, ಚಹರ್ ಮರು ಎಸೆತದಲ್ಲೇ ಗುಪ್ಟಿಲ್ ವಿಕೆಟ್ ಪಡೆಯಲು ಯಶಸ್ವಿಯಾದರು.
ಈ ವೇಳೆ ಚಹರ್ ಗುಪ್ಟಿಲ್ ರನ್ನು ದುರುಗುಟ್ಟಿ ನೋಡಿ ಏಟಿಗೆ ಎದುರೇಟು ನೀಡಿದರು.
ಇಬ್ಬರ ಈ ದೃಷ್ಟಿಯುದ್ಧ ಮೈದಾನದಲ್ಲಿದ್ದ ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿತು.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.