ಆಯುಧ ಪೂಜೆ ಪ್ರಯುಕ್ತ ಶಸ್ತ್ರಾಸ್ತ್ರಗಳ ಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ Rajnath Singh Shastra Puja
ಡಾರ್ಜಿಲಿಂಗ್, ಅಕ್ಟೋಬರ್26: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯುಧ ಪೂಜೆ ಪ್ರಯುಕ್ತ ಶಸ್ತ್ರಾಸ್ತ್ರಗಳ ಪೂಜೆ ನೆರವೇರಿಸಿ, ಭಾರತ-ಚೀನಾ ಗಡಿ ಉದ್ವಿಗ್ನತೆ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದರು. Rajnath Singh Shastra Puja
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ದಸರಾ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಸುಕ್ನಾ ಯುದ್ಧ ಸ್ಮಾರಕದಲ್ಲಿ ಶಸ್ತ್ರಾಸ್ತ್ರಗಳ ಪೂಜೆ ನೆರವೇರಿಸಿದರು. ಚೀಫ್ ಜನರಲ್ ಮನೋಜ್ ಮುಕುಂದ್ ನಾರವಾನೆ ಕೂಡ ರಾಜನಾಥ್ ಸಿಂಗ್ ಅವರೊಂದಿಗೆ ಉಪಸ್ಥಿತರಿದ್ದರು.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ದುರ್ಗಾ ನಾಗ್ ದೇವಸ್ಥಾನಕ್ಕೆ ಭೇಟಿ
ಪೂರ್ವ ಲಡಾಕ್‌ನಲ್ಲಿನ ಚೀನಾ ಭಾರತ ಗಡಿ ವಿವಾದದ ನಡುವೆ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್‌ಎಸಿ) ಯ ಸಿಕ್ಕಿಂ ಸೆಕ್ಟರ್‌ನ ಎತ್ತರದ ಗಡಿ ಪ್ರದೇಶದಲ್ಲಿ ರಕ್ಷಣಾ ಸಚಿವರು ದಸರಾವನ್ನು ಸೇನಾ ಸೈನಿಕರೊಂದಿಗೆ ಆಚರಿಸಲಿದ್ದಾರೆ.
ಭಾರತ-ಚೀನಾ ಗಡಿ ಉದ್ವಿಗ್ನತೆಯನ್ನು ಕೊನೆಗಾಣಿಸಲು ಮತ್ತು ಶಾಂತಿ ಕಾಪಾಡಲು ಭಾರತ ಬಯಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಅಲ್ಲದೆ, ನಮ್ಮ ಸೈನ್ಯವು ನಮ್ಮ ಭೂಮಿಯನ್ನು ಒಂದು ಇಂಚು ಸಹ ಆಕ್ರಮಿಸಲು ಬಿಡುವುದಿಲ್ಲ ಎಂದು ನನಗೆ ವಿಶ್ವಾಸವಿದೆ ಎಂದು ಸಿಂಗ್ ಡಾರ್ಜಿಲಿಂಗ್‌ನಲ್ಲಿ ಹೇಳಿದರು.
#WATCH Defence Minister Rajnath Singh performs ‘Shastra Puja’ at Sukna War Memorial in Darjeeling, West Bengal.
Army Chief General Manoj Mukund Naravane also present. pic.twitter.com/3jv5Ti0S4I
— ANI (@ANI) October 25, 2020
ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಗಡಿ ವಿವಾದ ಕಳೆದ ಐದು ತಿಂಗಳಿನಿಂದ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಅದು ಉಭಯ ದೇಶಗಳ ಸಂಬಂಧವನ್ನು ಗಮನಾರ್ಹವಾಗಿ ಬಿಗಡಾಯಿಸಿದೆ. ವಿವಾದವನ್ನು ಪರಿಹರಿಸಲು ಎರಡೂ ಕಡೆಯವರು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳನ್ನು ನಡೆಸಿದರೂ ವಿವಾದ ಕೊನೆಗೊಂಡಿಲ್ಲ ಮತ್ತು ಯಾವುದೇ ಪ್ರಗತಿಯನ್ನು ಸಾಧಿಸಲಾಗಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ