ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ದುರ್ಗಾ ನಾಗ್ ದೇವಸ್ಥಾನಕ್ಕೆ ಭೇಟಿ Farooq Abdulla visited temple
ಜಮ್ಮು ಕಾಶ್ಮೀರ, ಅಕ್ಟೋಬರ್25: ಮಹತ್ವದ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. Farooq Abdulla visited temple
ಶನಿವಾರ ದುರ್ಗಾ ಅಷ್ಟಮಿ ಮತ್ತು ರಾಮ್ ನವಮಿ ಸಂದರ್ಭದಲ್ಲಿ ಇಲ್ಲಿನ ಪ್ರಾಚೀನ ದುರ್ಗಾ ನಾಗ್’ ದೇವಸ್ಥಾನಕ್ಕೆ ಭೇಟಿ ನೀಡಿದ ಫಾರೂಕ್ ಅಬ್ದುಲ್ಲಾ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ಈ ವಾರದ ಆರಂಭದಲ್ಲಿ 84 ನೇ ವರ್ಷಕ್ಕೆ ಕಾಲಿಟ್ಟ ರಾಷ್ಟ್ರೀಯ ಸಮ್ಮೇಳನ (ಎನ್‌ಸಿ) ನಾಯಕ, ಮಾನವಕುಲದ ಶಾಂತಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಕಾಶ್ಮೀರಿ ಪಂಡಿತ್ ಸಮುದಾಯದ ಪುರೋಹಿತರು ಅಲ್ಲಿ ಹವಾನ್ ಕಾರ್ಯಕ್ರಮ ನಡೆಸುತ್ತಿರುವಾಗ ಅವರು ತಮ್ಮ ಪಕ್ಷದ ಸದಸ್ಯರೊಂದಿಗೆ ದಲ್ಗೇಟ್‌ನಲ್ಲಿರುವ ದೇವಸ್ಥಾನಕ್ಕೆ ಆಗಮಿಸಿದರು.
ಎಫ್‌ಎಟಿಎಫ್ ಗ್ರೇ ಪಟ್ಟಿಯಲ್ಲೇ ಉಳಿಯಲಿರುವ ಪಾಕಿಸ್ತಾನ
ಇದು ನಮ್ಮ ಹಿಂದೂ ಸಹೋದರ ಸಹೋದರಿಯರಿಗೆ ಮಹತ್ವದ ದಿನವಾಗಿದೆ ಮತ್ತು ಈ ದೇವಾಲಯಕ್ಕೆ ಮಹತ್ವವಿದೆ. ಇಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸುವ ಸಂದರ್ಭದಲ್ಲಿ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸಲು ಬಂದಿದ್ದೇನೆ ಎಂದು ಲೋಕಸಭಾ ಸದಸ್ಯರಾದ ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದರು.
ಜೊತೆಗೆ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರು ಆದಷ್ಟು ಬೇಗ ತಮ್ಮ ಮನೆಗಳಿಗೆ ಮರಳಬೇಕೆಂದು ಅವರು ಕೇಳಿ ಕೊಂಡರು.
ಸಾಂಪ್ರದಾಯಿಕ ಪಥಾನಿ ಸೂಟ್ ಧರಿಸಿ, ಎನ್‌ಸಿ ನಾಯಕ ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ ಫೇಸ್ ಗಾರ್ಡ್ ಧರಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರದ ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸಬೇಕೆಂದು ಅವರು ಮನವಿ ಮಾಡಿದರು.
ದುರ್ಗಾನಾಗ್ 700 ವರ್ಷಗಳಿಗಿಂತಲೂ ಹಳೆಯದಾದ ದೇವಾಲಯವೆಂದು ನಂಬಲಾಗಿದೆ. 2013 ರಲ್ಲಿ ದೇವಾಲಯದ ಆವರಣದಲ್ಲಿ ಶಿವಲಿಂಗವನ್ನು ಇರಿಸಲಾಗಿತ್ತು.
ಕಳೆದ ವರ್ಷ ಜಮ್ಮು ಕಾಶ್ಮೀರವನ್ನು ಕೇಂದ್ರ ಸರಕಾರ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿತ್ತು. ಇತ್ತೀಚಿಗೆ ಆರ್ಟಿಕಲ್ 370 ರ ರದ್ದತಿಗೆ ಚೀನಾ ಪಾಕಿಸ್ತಾನದ ಸಹಾಯವನ್ನು ಯಾಚಿಸಿದ್ದ ಫಾರೂಕ್ ಅಬ್ದುಲ್ಲಾ, 1990 ರಲ್ಲಿ ಕಾಶ್ಮೀರ ಪಂಡಿತರ ನರಮೇಧ ನಡೆಯುತ್ತಿದ್ದಾಗ ಅಮಾಯಕ ಹಿಂದೂಗಳ ಶಾಂತಿ ಮತ್ತು ಯೋಗಕ್ಷೇಮ ನೆನಪಾಗದು ವಿಷಾದನೀಯ. ಒಟ್ಟಿನಲ್ಲಿ ಕಣಿವೆ ಕೇಂದ್ರಾಡಳಿತ ಪ್ರದೇಶದ ಬದ್ದ ರಾಜಕೀಯ ವೈರಿಗಳು ತೆರೆಮರೆಯಲ್ಲಿ ಒಟ್ಟಾಗಿ ಭಾರತ ಸರಕಾರದ ವಿರುದ್ಧ ಕಟ್ಟಿ ಮಸೆಯುತ್ತಿರುವುದು ಸುಳ್ಳಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ