ರಕ್ಷಣಾ ಸಚಿವ ರಾಜನಾಥಸಿಂಗ್ ಗೆ ಕೊರೊನಾ ಪಾಸಿಟಿವ್ Saaksha Tv
ನವದೆಹಲಿ: ರಕ್ಷಣಾ ಸಚಿವ ರಾಜನಾಥಸಿಂಗ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಲಘು ರೋಗ ಲಕ್ಷಣಗಳು ಕಂಡು ಬಂದಿದ್ದು, ಪರೀಕ್ಷಿಸಿದ ನಂತರ ಪಾಸಿಟಿವ್ ಎಂದು ದೃಡಪಟ್ಟಿದೆ. ಅವರು ಹೋಂ ಕ್ವಾರೆಂಟೈನ್ ಆಗಿದ್ದೇನೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೇ ತಮ್ಮ ಸಂಪಕರ್ಕಕ್ಕೆ ಬಂದವರು ಹೋಂ ಕ್ವಾರೆಂಟೈನ್ ಆಗಿ ಮತ್ತು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದಾರೆ. ಇವರು ಜನೇವರಿ 8 ನೇ ತಾರೀಕಿನಂದು ಸೈನಿಕ ಶಾಲೆಯ ವೆಬಿನಾರ್ ನಲ್ಲಿ ಭಾಗವಿಹಿಸಿದ್ದರು.