ಅಕ್ಟೋಬರ್ 1 ರಿಂದ ದೆಹಲಿಯಲ್ಲಿ ಖಾಸಗಿ ಮದ್ಯದ ಅಂಗಡಿಗಳು ಬಂದ್ 

1 min read

ಅಕ್ಟೋಬರ್ 1 ರಿಂದ ದೆಹಲಿಯಲ್ಲಿ ಖಾಸಗಿ ಮದ್ಯದ ಅಂಗಡಿಗಳು ಬಂದ್

ನವದೆಹಲಿ : ಅಕ್ಟೋಬರ್ 1 ರಿಂದ ದೆಹಲಿಯಲ್ಲಿ ಖಾಸಗಿ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಪರಿಚಯಿಸಿದ ಹೊಸ ಅಬಕಾರಿ ನೀತಿ ಪ್ರಕಟಿಸಿದೆ. ನವೆಂಬರ್ 17 ರಿಂದ ದೆಹಲಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತದೆ. ಆದರೆ ಮತ್ತೆ ಘೋಷಣೆ ಮಾಡುವವರೆಗೂ ಖಾಸಗಿ ಮದ್ಯದ ಅಂಗಡಿಗಳು ಮುಚ್ಚಲ್ಪಡುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನೂ ಮಯೂರ್ ವಿಹಾರ್ ಹಂತ -1 ರಲ್ಲಿ ಡಿಎಲ್ಎಫ್ ಗ್ಯಾಲರಿಯಾ ಮಾಲ್ನಲ್ಲಿ 13 ಖಾಸಗಿ ಮದ್ಯದಂಗಡಿಗಳಿವೆ, ಅವುಗಳು ಎಲ್ -10 ಪರವಾನಗಿಗಳನ್ನು ಹೊಂದಿವೆ. ಆದರೆ ಅವರ ಪರವಾನಗಿಯನ್ನು ನವೀಕರಿಸಲು ಸಾಧ್ಯವಾಗದೇ ಇರುವ ಕಾರಣಕ್ಕೆ ಸೆಪ್ಟೆಂಬರ್ 30 ರ ನಂತರ, ಈ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗುವುದು ಎನ್ನಲಾಗಿದೆ.

ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಪ್ರಕಾರ, ಎಲ್ಲಾ ಹಳೆಯ ಮದ್ಯದಂಗಡಿಗಳನ್ನು ಮುಚ್ಚಲಾಗುತ್ತಿದೆ ಮತ್ತು ಹೊಸ ವ್ಯವಸ್ಥೆಯ ಪ್ರಕಾರ, ದೆಹಲಿಯ ಎಲ್ಲಾ ಭಾಗಗಳಲ್ಲಿ ಅಂಗಡಿಗಳನ್ನು ಸಮಾನವಾಗಿ ತೆರೆಯಬೇಕು.
ದೆಹಲಿ ಸರ್ಕಾರವು ಹೊಸ ಅಂಗಡಿಗಳಿಗೆ ಬಿಡ್ಡಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸೆಪ್ಟೆಂಬರ್ 15 ರಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪತ್ರಿಗೋಷ್ಠಿಯಲ್ಲಿ ತಿಳಿಸಿದ್ದರು.

ಇದರಲ್ಲಿ, ಸಿಸೋಡಿಯಾ “ಹೊಸ ಅಬಕಾರಿ ನೀತಿ ಜಾರಿಗೆ ಬಂದ ನಂತರ, ಮದ್ಯ ಮಾರಾಟದ ನಿಯಮಗಳು ಬದಲಾಗಲಿವೆ.

‘ನಯಾಗರಾ’ ದೇಶ ಕೆನಡಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳು..!

ದೆಹಲಿ ಸರ್ಕಾರವು 2019-20ರ ಅವಧಿಯಲ್ಲಿ ಅಬಕಾರಿ ಮೂಲಕ ಸುಮಾರು 6400 ಕೋಟಿ ರೂಪಾಯಿಗಳ ಆದಾಯ ಸಂಗ್ರಹವನ್ನು ಹೊಂದಿತ್ತು. ಹೊಸ ಅಬಕಾರಿ ನೀತಿಯನ್ನು ಪರಿಚಯಿಸಿದ ನಂತರ, ಇದು ಸುಮಾರು 3,500 ಕೋಟಿ ರೂಪಾಯಿಗಳಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ, ಈಗ ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯ ಮೂಲಕ, ಸುಮಾರು 10,000 ಕೋಟಿ ರೂಪಾಯಿಗಳ ವಾರ್ಷಿಕ ಆದಾಯವು ಲಭ್ಯವಿರುತ್ತದೆ ಎಂದು ಭಾವಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd