ರೋಡ್ ಡಿವೈಡರ್ ಮೇಲೆ ಮಲಗಿದ್ದವರ ಮೇಲೆ ಹರಿದ ಟ್ರಕ್ – ನಾಲ್ವರ ಸಾವು..
ರಸ್ತೆ ಡಿವೈಡರ್ ಮೇಲೆ ಮಲಗಿದ್ದ ಅಪರಿಚಿತರ ಮೇಲೆ ಟ್ರಕ್ ಹರಿದು 4 ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ತಡರಾತ್ರಿ ದೆಹಲಿಯಲ್ಲಿ ನಡೆದಿದೆ.
ಮುಂಜಾನೆ 1.51 ರ ಸುಮಾರಿಗೆ ಸೀಮಾಪುರಿ ಡಿಟಿಸಿ ಡಿಪೋ ರೆಡ ಲೈಟ್ ದಾಟುತ್ತಿದ್ದಾಗ ರಸ್ತೆ ಡಿವೈಡರ್ ಮೇಲೆ ಮಲಗಿದ್ದ 6 ಜನರ ಮೇಲೆ ಹರಿದಿದ್ದು ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.
52 ವರ್ಷದ ಕರೀಂ, 25 ವರ್ಷದ ಚೊಟ್ಟೆ ಖಾನ್ಸ್, 38 ವರ್ಷದ ಶಾ ಆಲಂ ಮತ್ತು 45 ವರ್ಷದ ರಾಹುಲ್ ಮೃತಪಟ್ಟ 4 ಮಂದಿ. ಗಾಯಗೊಂಡವರಲ್ಲಿ 16 ವರ್ಷದ ಮನೀಶ್ ಮತ್ತು 30 ವರ್ಷದ ಪ್ರದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
https://twitter.com/ANI/status/1572420634889822208?ref_src=twsrc%5Etfw%7Ctwcamp%5Etweetembed%7Ctwterm%5E1572420634889822208%7Ctwgr%5Ed1cda4ccbbd735eb7adb2e5ff57a0ea3db5fe5d4%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2022%2Fsep%2F21%2Fspeeding-truck-runs-over-people-sleeping-on-road-divider-in-delhi-four-killed-477163.html








