ಶಿಖರ್ ಗೆ ಶಾಕ್.. ಡೆಲ್ಲಿ ಟೀಂನಲ್ಲಿ ನೋ ಚಾನ್ಸ್

1 min read
shikhar dhavan ipl 2020 delhi capitals saakshatv

ಶಿಖರ್ ಗೆ ಶಾಕ್.. ಡೆಲ್ಲಿ ಟೀಂನಲ್ಲಿ ನೋ ಚಾನ್ಸ್ shikhar-dhawan saaksha tv

ಐಪಿಎಲ್ 15ನೇ ಸೀಸನ್‍ಗಾಗಿ ರಿಟೈನ್ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಅಂತಿಮ ದಿನಾಂಕ ಸಮೀಪಿಸುತ್ತಿದ್ದಂತೆ, ಆಯಾ ತಂಡಗಳು ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತಿವೆ.

ತಂಡಗಳು ಈ ಪಟ್ಟಿಯನ್ನು ನವೆಂಬರ್ 30 ರೊಳಗೆ ಸಲ್ಲಿಸಬೇಕು. ಬಿಸಿಸಿಐ ನಿಯಮಗಳ ಪ್ರಕಾರ, ಪ್ರತಿ ತಂಡವು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು.

ಅದರಲ್ಲಿ ವಿದೇಶಿ ಆಟಗಾರರಿರಬೇಕು. ಈ ಕ್ರಮಾಂಕದಲ್ಲಿ ಯಾವ ತಂಡವು ಯಾವ ಆಟಗಾರನನ್ನು ಉಳಿಸಿಕೊಳ್ಳಲಿವೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಟೈನ್ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆಯಂತೆ.

shikhar-dhawan saaksha tv

ಆದರೆ, ಕಳೆದ ಎರಡು ಐಪಿಎಲ್ ಸೀಸನ್ ಗಳಲ್ಲಿ ತಂಡದ ಪರ ಗರಿಷ್ಠ ಸ್ಕೋರರ್ ಆಗಿದ್ದ ಶಿಖರ್ ಧವನ್ ಅವರನ್ನು ಕೈಬಿಡಲು ನಿರ್ಧರಿಸಿದೆಯಂತೆ.

ಅಲ್ಲದೆ ಮುಂಬರುವ ಆವೃತ್ತಿಗಳಲ್ಲೂ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಶ್ರೇಯಸ್ ಅಯ್ಯರ್, ಅಶ್ವಿನ್, ಶಿಖರ್ ಧವನ್ ಹಾಗೂ ಕಗಿಸೊ ರಬಾಡ ಅವರನ್ನು ಕೈಬಿಡಲು ಡೆಲ್ಲಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಅದೇ ರೀತಿ ಪೃಥ್ವಿ ಶಾ ಮತ್ತು ಅಕ್ಷರ್ ಪಟೇಲ್ ಅವರನ್ನು ಉಳಿಸಿಕೊಳ್ಳಲು ಡೆಲ್ಲಿ ಚಿಂತನೆ ನಡೆಸಿದೆ.

ಇನ್ನು ಐಪಿಎಲ್ – 2022 ರ ಮೆಗಾ ಹರಾಜು ಡಿಸೆಂಬರ್‍ನಲ್ಲಿ ಪ್ರಾರಂಭವಾಗುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd