ಹೊಸದಿಲ್ಲಿ, ಜೂನ್ 8: ದೆಹಲಿ ಸರ್ಕಾರ ಮದ್ಯ ಮಾರಾಟದ ಮೇಲೆ ಹೇರಿದ್ದ ಶೇಕಡಾ 70 ಕೊರೊನಾ ವಿಶೇಷ ಶುಲ್ಕವನ್ನು ಹಿಂದಕ್ಕೆ ಪಡೆದಿದೆ. ಇದರಿಂದ ದೆಹಲಿಯಲ್ಲಿ ಮದ್ಯದ ದರದಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಲಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕೊರೊನಾ ವಿಶೇಷ ಶುಲ್ಕ ಹಿಂಪಡೆಯುವ ಬಗ್ಗೆ ಮತ್ತು ಶೇ.20ರಿಂದ 25ರಷ್ಟು ವ್ಯಾಟ್ ಟ್ಯಾಕ್ಸ್ ಹೇರುವ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಲಾಕ್ ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ಒಪ್ಪಿಗೆ ನೀಡಿದ ಸಂದರ್ಭದಲ್ಲಿ ಸರ್ಕಾರ ಮದ್ಯದ ಮೂಲ ಬೆಲೆಯ ಮೇಲೆ ಶೇಕಡಾ 70 ರಷ್ಟು ಕೊರೊನಾ ವಿಶೇಷ ಶುಲ್ಕವನ್ನು ವಿಧಿಸಿತ್ತು. ಇದರಿಂದಾಗಿ ಮದ್ಯದ ಬೆಲೆಯಲ್ಲಿ ಏರಿಕೆ ಕಂಡಿತ್ತು. ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾಗಿದ್ದ ಅರ್ಥಿಕ ನಷ್ಟವನ್ನು ಸರಿಪಡಿಸುವ ನಿಟ್ಟಿನಲ್ಲಿ ಮತ್ತು ಮದ್ಯ ಖರೀದಿಗಾಗಿ ಸೇರುತ್ತಿದ್ದ ದೊಡ್ಡ ಪ್ರಮಾಣದ ಜನರನ್ನು ನಿಯಂತ್ರಿಸಲು ಮದ್ಯದ ಬೆಲೆಯನ್ನು ಏರಿಸಲಾಗಿತ್ತು.
ಇಂದಿನಿಂದ ದೆಹಲಿ ಅನ್ ಲಾಕ್ ಆಗಲಿದ್ದು, ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅಂಗಡಿ ಮುಂಗಟ್ಟು, ಮಾಲ್, ಮಾರುಕಟ್ಟೆ, ಸಾರ್ವಜನಿಕ ಪ್ರದೇಶಗಳು ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿದೆ.
ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂವತ್ತು ಸಾವಿರದ ಗಡಿಯಲ್ಲಿದ್ದು, ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 20ರಷ್ಟು ಬೆಡ್ ಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲು ಆದೇಶಿಸಲಾಗಿದೆ.
ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ
ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...








