ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ – ಟಾಪ್ 50ರಲ್ಲಿ ಭಾರತದ 35 ನಗರಗಳು
ಮಂಗಳವಾರ ಬಿಡುಗಡೆಯಾದ ಸ್ವಿಸ್ ಸಂಸ್ಥೆ IQAir ಸಿದ್ಧಪಡಿಸಿದ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ, 2021 ರಲ್ಲಿ ಢಾಕಾ, N’Djamena, Dushanbe ಮತ್ತು Muscat ನಂತರ ನವದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿ ನಾಲ್ಕನೇ ವರ್ಷಕ್ಕೆ ಮುಂದುವರೆದಿದೆ. ಅತ್ಯಂತ ಕಳಪೆ ಗಾಳಿಯ ಗುಣಮಟ್ಟ ಹೊಂದಿರುವ 50 ನಗರಗಳಲ್ಲಿ 35 ನಗರಗಳು ಭಾರತದಲ್ಲಿವೆ ಎಂದು ವರದಿ ತಿಳಿಸಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಚೀನಾದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುತ್ತಿದೆ ಎಂದು ಅಧ್ಯಯನವು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಷ್ಟು ಗಾಳಿಯ ಗುಣಮಟ್ಟದ ಮಾನದಂಡಗಳನ್ನ ಭಾರತದ ಯಾವುದೇ ನಗರವು ಪೂರೈಸಿಲ್ಲ ಎಂದು IQAir ವರದಿ ಹೇಳಿದೆ.
“ಭಾರತವು ಅತ್ಯಂತ ಕಲುಷಿತ ನಗರಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವುದನ್ನು ಮುಂದುವರೆಸಿದೆ ಮತ್ತು ಪಟ್ಟಿಯಲ್ಲಿರುವ ಅಗ್ರ 50 ಅತ್ಯಂತ ಕಲುಷಿತ ನಗರಗಳಲ್ಲಿ 35 ನಗರಗಳು ಈ ದೇಶದಲ್ಲಿದೆ. ಗ್ರೀನ್‌ಪೀಸ್ ಇಂಡಿಯಾದ ಕ್ಯಾಂಪೇನ್ ಮ್ಯಾನೇಜರ್ ಅವಿನಾಶ್ ಚಂಚಲ್ ಈ ವರದಿಯು ಸರ್ಕಾರಗಳು ಮತ್ತು ನಿಗಮಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದರು.