ದೊಣ್ಣೆ ಮೆಣಸು ವಾಂಗಿಬಾತ್ ರೆಸಿಪಿ
ಬೇಕಾಗುವ ಸಾಮಗ್ರಿಗಳು
ದೊಣ್ಣೆ ಮೆಣಸು 2
ಈರುಳ್ಳಿ 2
ಕರಿಬೇವಿನ ಸೊಪ್ಪು – ಸ್ವಲ್ಪ
ಹುಣಸೆ ರಸ 1/4 ಕಪ್
ಬೇಯಿಸಿದ ಬಟಾಣಿ – 1/2 ಕಪ್
ಗೋಡಂಬಿ – ಸ್ವಲ್ಪ
ಕಡಲೆ ಕಾಯಿ ಬೀಜ – ಸ್ವಲ್ಪ
ಕಡಲೆ ಬೇಳೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ವಾಂಗೀಬಾತ್ ಪುಡಿ – 2 ಚಮಚ
ಮೆಣಸಿನ ಪುಡಿ – ಅಗತ್ಯ
ಬೆಲ್ಲ – 1 ತುಂಡು
ಎಣ್ಣೆ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಇಂಗು – 1/4 ಚಮಚ
ನೀರು
ಮಾಡುವ ವಿಧಾನ
ಮೊದಲಿಗೆ ದೊಣ್ಣೆ ಮೆಣಸು ಮತ್ತು ಈರುಳ್ಳಿಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ, ಇಂಗು, ಅರಿಶಿನ ಪುಡಿ, ಮತ್ತು ಕಡಲೆಕಾಯಿ ಬೀಜಗಳನ್ನು ಸೇರಿಸಿ ಸ್ವಲ್ಪ ಹುರಿಯಿರಿ.
ಇದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಮತ್ತು ಗೋಡಂಬಿ ಸೇರಿಸಿ ಸ್ವಲ್ಪ ಕೆಂಪಾಗುವವರೆಗೆ ಹುರಿಯಿರಿ.
ಈಗ ಕತ್ತರಿಸಿದ ಈರುಳ್ಳಿ, ದೊಣ್ಣೆ ಮೆಣಸು, ಮತ್ತು ಕರಿಬೇವು ಸೇರಿಸಿ ಚೆನ್ನಾಗಿ ಬಾಡಿಸಿ. ಇದಕ್ಕೆ ಬೇಯಿಸಿದ ಬಟಾಣಿಯನ್ನು ಸೇರಿಸಿ ಮತ್ತು ಮಿಶ್ರ ಮಾಡಿ.
ಈ ಮಿಶ್ರಣಕ್ಕೆ ವಾಂಗೀಬಾತ್ ಪುಡಿ, ಮೆಣಸಿನ ಪುಡಿ, ಉಪ್ಪು, ಬೆಲ್ಲ, ಮತ್ತು ಹುಣಸೆ ರಸ ಸೇರಿಸಿ. ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ.
10 ನಿಮಿಷ ಕೈಯಾಡಿಸಿ ಕುದಿಸಿ. ನಂತರ, ಚಿಕ್ಕದಾಗಿ ಕತ್ತರಿಸಿದ ಕೊತಂಬರಿ ಸೊಪ್ಪು ಸೇರಿಸಿ.
ಕೊನೆಗೆ ಸಿದ್ಧವಾದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ರುಚಿಕರವಾದ ದೊಣ್ಣೆ ಮೆಣಸಿನ ವಾಂಗಿಬಾತ್ ಸವಿಯಲು ಸಿದ್ಧ!








