Delivery Boy : ಐಟಂ ಮಿಸ್ಸಾಗಿದೆ ಎಂದು ಡೆಲವರಿ ಬಾಯ್ ಗೆ ಚಪ್ಪಲಿಯಿಂದ ಹೊಡೆದ ದಂಪತಿಗಳು…
ಐಟಂ ಮಿಸ್ ಆಗಿದೆ ಎಂದು ಗ್ರಾಸರಿ ಡಲಿವರಿ ಬಾಯ್ ಗೆ ದಂಪತಿಗಳು ಚಪ್ಪಲಿಯಿಂದ ಹೊಡೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದೆ. ಇದೀಗ ಡೆಲೆವರಿ ಬಾಯ್ಸ್ ಪ್ರತಿಭಟನೆಗೆ ಕೂತಿದ್ದು ದಂಪತಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಬ್ಲಿಂಕ್ಇಟ್ ಆಪ್ ಮೂಲಕ ಶ್ರೀನಿ ಮತ್ತು ಅವರ ಪತ್ನಿ ದಿನಸಿ ಸಾಮನುಗಳನ್ನ ಆರ್ಡರ್ ಮಾಡಿದ್ದರು. ಒಟ್ಟು ಎಂಟು ಸಾಮಾನುಗಳನ್ನ ಆರ್ಡರ್ ಮಾಡಿದ್ದಾರೆ. 8 ಗಂಟೆ ಸುಮಾರಿಗೆ ಗೊಲ್ಲಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ಗೆ ಸಾಮಾನು ತಂದು ಕೊಟ್ಟ ಡಿಲೆವರಿ ಬಾಯ್ ಒಮ್ಮೆ ಚೆಕ್ ಮಾಡಿಕೊಳ್ಳಿ ಎಂದಿದ್ದಾರೆ.
ಇರಲಿ ಪರವಾಗಿಲ್ಲ ಎಂದ ಕಸ್ಟಮರ್ಸ್ ಮನೆಯೊಳಗೆ ಹೋಗಿ ಚೆಕ್ ಮಾಡುತ್ತೇವೆ ಎಂದಿದ್ದಾರೆ. ಬಳಿಕ ಹೊರಬಂದು ಎರಡು ಐಟಂ ಗಳ ಮಿಸ್ ಆಗಿದೆ ಎಂದಿದ್ದಾರೆ. ಇದಕ್ಕೆ ಡೆಲೆವರಿ ಬಾಯ್ ನನ್ ಕಣ್ಣೆದುರೇ ಚೆಕ್ ಮಾಡಬಹುದಿತ್ತು ಎಂದಿದ್ದಾನೆ. ಇಷ್ಟಕ್ಕೆ ಕೋಪಗೊಂಡ ದಂಪತಿಗಳು ಡೆಲೆವರಿ ಬಾಯ್ ಗೆ ಚಪ್ಪಲಿ ಕಾಲಿನಿಂದ ಹೊಡೆದಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ನೂರಾರು ಡಲೆವರಿ ಬಾಯ್ಸ್ ಗಳು ಅಪಾರ್ಟ್ಮೆಂಟ್ ಗೇಟ್ ಬಂದ್ ಮಾಡಿ ಪ್ರತಿಭಟನೆಗೆ ಕುಳಿತಿದ್ದು ದಂಪತಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
Delivery Boy: The couple slapped the delivery boy saying that the item was missing…








