ADVERTISEMENT
Tuesday, August 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಕೇಂದ್ರ ಮಾದರಿ ವೇತನ ಮತ್ತು ಒಪಿಎಸ್ ಜಾರಿಗೆ ಆಗ್ರಹ: ಸರ್ಕಾರಕ್ಕೆ ಸಿ ಎಸ್ ಷಡಕ್ಷರಿ ಖಡಕ್ ಎಚ್ಚರಿಕೆ

Demand for implementation of Central Model Wage and OPS: CS Shadakshari warns the government

Shwetha by Shwetha
January 2, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ (OPS) ಜಾರಿಗೊಳಿಸದಿದ್ದರೆ, ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ ನೀಡಬೇಕೆಂಬ ಹೋರಾಟವನ್ನು ರೂಪಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೌಕರರ ಹಕ್ಕುಗಳು ಮತ್ತು ಸಂಘಟನೆಯ ಮುಂದಿನ ನಡೆಗಳ ಕುರಿತು ವಿಸ್ತೃತವಾಗಿ ಮಾತನಾಡಿದರು.

Related posts

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

August 25, 2026
ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

August 25, 2026

ಎನ್ ಪಿಎಸ್ ರದ್ದು ಮತ್ತು ಒಪಿಎಸ್ ಜಾರಿ ಅನಿವಾರ್ಯ

ರಾಜ್ಯದಲ್ಲಿ ಸುಮಾರು 2.90 ಲಕ್ಷ ನೌಕರರು ಎನ್‌ಪಿಎಸ್ (ಹೊಸ ಪಿಂಚಣಿ ಯೋಜನೆ) ವ್ಯಾಪ್ತಿಯಲ್ಲಿದ್ದಾರೆ. ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡಬೇಕು ಎಂಬುದು ನೌಕರರ ಪ್ರಮುಖ ಹಕ್ಕೊತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸಂಘದ ಪ್ರಯತ್ನದಿಂದ ಸರ್ಕಾರ ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ 5 ವರ್ಷಗಳಲ್ಲಿ ಸಂಘದ ಹೋರಾಟದ ಫಲವಾಗಿ ಹತ್ತಾರು ಮಹತ್ವದ ಬದಲಾವಣೆಗಳಾಗಿವೆ ಎಂದು ಅವರು ತಿಳಿಸಿದರು.

ಕೇಂದ್ರ ಮಾದರಿ ವೇತನಕ್ಕೆ ಪಟ್ಟು

ಒಂದು ವೇಳೆ ಸರ್ಕಾರ ಒಪಿಎಸ್ ಜಾರಿಗೊಳಿಸಲು ವಿಫಲವಾದರೆ, ದೇಶದ ಇತರೆ 22 ರಾಜ್ಯಗಳು ಜಾರಿಗೆ ತಂದಿರುವಂತೆ, ಕರ್ನಾಟಕದಲ್ಲೂ ಸೆಂಟ್ರಲ್ ಪೇ (ಕೇಂದ್ರ ಮಾದರಿ ವೇತನ) ಯೋಜನೆಯನ್ನು ಜಾರಿಗೊಳಿಸಲೇಬೇಕಾಗುತ್ತದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆಯಲಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದು ಷಡಕ್ಷರಿ ಸ್ಪಷ್ಟಪಡಿಸಿದರು.

ಗೈರು ಹಾಜರಾದ ನೌಕರರಿಗೆ ಚಾಟಿ

ಇದೇ ಸಂದರ್ಭದಲ್ಲಿ, ಸಂಘದ ಕಾರ್ಯಕ್ರಮಕ್ಕೆ ಗೈರು ಹಾಜರಾದ ಸಾಗರ ತಾಲ್ಲೂಕಿನ ನೌಕರರ ವಿರುದ್ಧ ಷಡಕ್ಷರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾಗರದಲ್ಲಿ 1,700ಕ್ಕೂ ಹೆಚ್ಚು ನೌಕರರಿದ್ದರೂ ಶೇ.50 ರಷ್ಟು ಮಂದಿ ಗೈರಾಗಿರುವುದು ಸರಿಯಲ್ಲ. ಸಂಘಟನೆಯ ಕರೆಗೆ ನಿರ್ಲಕ್ಷ್ಯ ತೋರುವುದು ಮತ್ತು ಅತೀ ಬುದ್ಧಿವಂತಿಕೆ ಪ್ರದರ್ಶಿಸುವುದನ್ನು ಸಹಿಸಲು ಸಾಧ್ಯವಿಲ್ಲ. ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬಾರದಿದ್ದರೆ ನಾವೇಕೆ ಬರಬೇಕು ಎಂದು ಪ್ರಶ್ನಿಸುವ ಮೂಲಕ ನೌಕರರಿಗೆ ಬಿಸಿ ಮುಟ್ಟಿಸಿದರು.

ಸಂಘಟನೆಯ ಹೋರಾಟದ ಫಲವಾಗಿಯೇ 7ನೇ ವೇತನ ಆಯೋಗ ಜಾರಿಯಾಗಿದ್ದು, ಇದರ ಲಾಭ ಪ್ರತಿಯೊಬ್ಬ ನೌಕರರಿಗೂ ತಲುಪಿದೆ. ಇದಲ್ಲದೆ, ಮಹಿಳಾ ನೌಕರರಿಗೆ ಋತುಚಕ್ರ ರಜೆ, ನೌಕರರ ಪೋಷಕರಿಗೆ ಉಚಿತ ಆರೋಗ್ಯ ಚಿಕಿತ್ಸೆ ಮತ್ತು ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರದಂತಹ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಂಘದ ಸಾಧನೆಗಳನ್ನು ಅವರು ಬಿಚ್ಚಿಟ್ಟರು.

ಖಾಲಿ ಹುದ್ದೆಗಳ ಮಧ್ಯೆಯೂ ಪ್ರಾಮಾಣಿಕ ಸೇವೆ

ರಾಜ್ಯದಲ್ಲಿ 2.73 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದರಿಂದ ಹಾಲಿ ಇರುವ ನೌಕರರ ಮೇಲೆ ವಿಪರೀತ ಕೆಲಸದ ಒತ್ತಡವಿದೆ. ಆದರೂ ನೌಕರರು ತಮ್ಮ ವೇತನಕ್ಕೆ ತಕ್ಕಂತೆ, ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಲೆನಾಡು ಹಾಗೂ ಗಡಿಭಾಗದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನೌಕರರು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎನ್, ರಾಜ್ಯಾಧ್ಯಕ್ಷರ ಕಾರ್ಯವೈಖರಿಯನ್ನು ಪಾದರಸಕ್ಕೆ ಹೋಲಿಸಿದರು. ಸಿ.ಎಸ್. ಷಡಕ್ಷರಿ ಅವರು ನೌಕರರ ಪರವಾಗಿ ನಿರಂತರವಾಗಿ ಸ್ಪಂದಿಸುವ ಯುವ ನಾಯಕರಾಗಿದ್ದು, ಕ್ರೀಡಾಕೂಟಕ್ಕೆ 3 ಕೋಟಿ ಅನುದಾನ ತರುವ ಮೂಲಕ ಕ್ರೀಡಾಸ್ಪೂರ್ತಿ ತುಂಬಿದ್ದಾರೆ ಎಂದು ಶ್ಲಾಘಿಸಿದರು. ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಸಹಕಾರವನ್ನೂ ಇದೇ ವೇಳೆ ಸ್ಮರಿಸಲಾಯಿತು.

ShareTweetSendShare
Join us on:

Related Posts

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್‌ಲೈನ್‌ನಲ್ಲಿ ಚೆಕ್ ಮಾಡಿ

by Shwetha
August 25, 2026
0

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ನಲ್ಲಿ SIR-2026,...

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

ನಾನು ಐಎಎಸ್ ಓದಿಲ್ಲದಿರಬಹುದು ಆದರೆ 6 ಬಾರಿ ಶಾಸಕ: ಜನಪ್ರತಿನಿಧಿಗಳನ್ನೇ ಹಗುರವಾಗಿ ಕಂಡರೆ ಸಹಿಸಲ್ಲ- ಡಿಸಿ ಲತಾಕುಮಾರಿಗೆ ರೇವಣ್ಣ ಖಡಕ್ ವಾರ್ನಿಂಗ್.

by Shwetha
August 25, 2026
0

ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಡಳಿತ ವೈಖರಿ ಮತ್ತು ನಡವಳಿಕೆ ವಿರುದ್ಧ ಮಾಜಿ ಸಚಿವ ಹಾಗೂ ಹಾಸನ ಶಾಸಕ ಹೆಚ್.ಡಿ. ರೇವಣ್ಣ ಅವರು ಯುದ್ಧ ಸಾರಿದ್ದಾರೆ....

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮದ ನಡುವೆ ದೇಶವಿರೋಧಿ ಕೃತ್ಯ: ಟಿಪ್ಪು ಕಟೌಟ್ ಮುಂದೆ ಪಾಕಿಸ್ತಾನಿ ಹಾಡು ಬಳಸಿ ರೀಲ್ಸ್ ಮಾಡಿದ ಯುವಕ ಅರೆಸ್ಟ್.

ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮದ ನಡುವೆ ದೇಶವಿರೋಧಿ ಕೃತ್ಯ: ಟಿಪ್ಪು ಕಟೌಟ್ ಮುಂದೆ ಪಾಕಿಸ್ತಾನಿ ಹಾಡು ಬಳಸಿ ರೀಲ್ಸ್ ಮಾಡಿದ ಯುವಕ ಅರೆಸ್ಟ್.

by Shwetha
August 25, 2026
0

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಬ್ಬದ ಸಂಭ್ರಮದ ನಡುವೆಯೇ ಕಿಡಿಗೇಡಿಗಳ ಅತಿರೇಕದ ವರ್ತನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಟಿಪ್ಪು ಸುಲ್ತಾನ್ ಕಟೌಟ್ ಮುಂದೆ ಪಾಕಿಸ್ತಾನಿ...

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

ತಮಿಳುನಾಡಿನಲ್ಲಿ ಮಹತ್ವದ ಘೋಷಣೆ; ಮಹಿಳೆಯರಿಗೆ ಉಚಿತ ಬಸ್, ಬಡ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್

by Shwetha
August 25, 2026
0

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಹಲವು ಮಹತ್ವದ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ವಿಸ್ತರಿಸುವುದರ ಜೊತೆಗೆ,...

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

ರಾಹುಲ್ ಗಾಂಧಿ ಈ ದೇಶದಲ್ಲಿರಲು ನಾಲಾಯಕ್- ನಕ್ಸಲಿಸಂ ಹೊಸಕಿ ಹಾಕಿದ ಅಮಿತ್ ಶಾ ಟೀಕಿಸಲು ರಾಹುಲ್‌ಗೆ ಯೋಗ್ಯತೆ ಇಲ್ಲ: 70 ವರ್ಷದ ಕಾಂಗ್ರೆಸ್ ಪಾಪವನ್ನು ತೊಳೆದಿದೆ ಬಿಜೆಪಿ- ರಾಹುಲ್‌ಗೆ ವಿ.ಸೋಮಣ್ಣ ತಿರುಗೇಟು.

by Shwetha
August 25, 2026
0

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವನ್ನು ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram