ನಿನ್ನೆ ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡ 19 ರನ್ ಗಳ ಸೋಲು ಕಂಡಿತು. ಆದರೆ, ಅಂಕಪಟ್ಟಿಯಲ್ಲಿ ಮಾತ್ರ ಎರಡನೇ ಸ್ಥಾನದಲ್ಲಿಯೇ ಮುಂದುವರೆದಿದೆ.
ಪಾಯಿಂಟ್ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಇವರು ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಕೇವಲ ಒಂದು ಸೋಲು ಕಂಡು ಒಟ್ಟು ಎಂಟು ಅಂಕ ಪಡೆದುಕೊಂಡಿದೆ. ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಸ್ಥಾನದಲ್ಲಿದ್ದು, ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಮೂರು ಸೋಲು ಕಂಡು ಒಟ್ಟು 6 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ. ಇವರು ಆಡಿರುವ ಐದು ಪಂದ್ಯಗಳ ಪೈಕಿ ಮೂರು ಗೆಲುವು ಹಾಗೂ ಎರಡು ಪಂದ್ಯದಲ್ಲಿ ಸೋಲುಂಡು 6 ಅಂಕ ಸಂಪಾದಿಸಿದೆ. ಆದರೆ, ರನ್ ರೇಟ್ ನಲ್ಲಿ ಆರ್ ಸಿಬಿಗಿಂತಲೂ ಮುಂಬೈಯ ಹಿಂದೆ ಇರುವುದರಿಂದಾಗಿ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.
ಯುಪಿ ವಾರಿಯರ್ಸ್ ತಂಡ ಆರ್ಸಿಬಿ ವಿರುದ್ಧ ಸೋತು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಐದು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಮೂರು ಗೆಲುವು ಕಂಡು 4 ಅಂಕ ಪಡೆದುಕೊಂಡಿದೆ. ಗುಜರಾತ್ ಗೈಂಟ್ಸ್ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಒಂದು ಪಂದ್ಯದಲ್ಲಿ ಮಾತ್ರ ಗೆದ್ದು ಕೊನೆಯ ಸ್ಥಾನದಲ್ಲಿ ಉಳಿದಿದೆ.