ದಾಳಿ ಮಾಡುತ್ತಿರುವ ಹುಲಿ ಗುರುತು ಪತ್ತೆ : ಕೂಂಬಿಂಗ್ ಸ್ಥಗಿತ

1 min read
tiger

ದಾಳಿ ಮಾಡುತ್ತಿರುವ ಹುಲಿ ಗುರುತು ಪತ್ತೆ : ಕೂಂಬಿಂಗ್ ಸ್ಥಗಿತ

ಕೊಡಗು : ನಿರಂತರ ದಾಳಿ ಮಾಡುತ್ತಿರುವ ಹುಲಿ ನಾಗರಹೊಳೆ ಅಭಯಾರಣ್ಯಕ್ಕೆ ಸೇರಿದ್ದಾಗಿದೆ ಎಂದು ತಜ್ಞರು ಖಚಿತ ಪಡೆಸಿದ್ದಾರೆ. 2013ರಲ್ಲಿ ನಡೆದ ಹುಲಿ ಗಣತಿ ವೇಳೆ ಕ್ಯಾಮರಾದಲ್ಲಿ ಸೆರೆಯಾಗಿದ್ದ ಹುಲಿಯೇ ಈ ದಾಳಿ ಮಾಡುತ್ತಿದೆ. 2013ರಲ್ಲಿ ನಾಗರಹೊಳೆಯ ಕಲ್ಲಳ್ಳದಲ್ಲಿ ಅಳವಡಿಸಿದ್ದ ಕ್ಯಾಮರಾಕ್ಕೆ ಸೆರೆಯಾಗಿರುವ ಹುಲಿ ,ಇತ್ತೀಚೆಗೆ ಬೆಳ್ಳೂರಿನಲ್ಲಿ ನಂಜಪ್ಪ ಎಂಬುವವರ ಹಸು ಮೇಲೆ ದಾಳಿ ಮಾಡಿದ ಹುಲಿಗೆ ಸಾಮ್ಯತೆಯಿದೆ. ಹುಲಿಗೆ ಅಂದಾಜು 10 ವರ್ಷಗಳಾಗಿದ್ದು ಬೆಳ್ಳೂರು, ಟಿ.ಶೆಟ್ಟಿಗೇರಿ, ಹರಿಹರ ಮತ್ತು ಕುಮಟೂರಿನಲ್ಲಿ ದಾಳಿ ಮಾಡಿದ್ದು ಇದೇ ಹುಲಿ ಎಂದು ಹುಲಿ ತಜ್ಞರು ಖಾತ್ರಿ ಮಾಡಿದ್ದಾರೆ.

 tiger

ಅಂದಹಾಗೆ ಕಳೆದ 12 ದಿನಗಳಿಂದ ಹುಲಿ ಸೆರೆಗೆ ಕೂಂಬಿಂಗ್ ನಡೆಸಲಾಗುತ್ತಿದೆ. ಆದ್ರೆ ಈವರೆಗೂ ಹುಲಿ ಪತ್ತೆಯಾಗಿಲ್ಲ. ಈಗಾಗಿ ಕೆಲ ಕಾರಣಾಂತರಗಳಿಂದ 150 ಮಂದಿ ಸಿಬ್ಬಂದಿ ಒಳಗೊಂಡು ನಡೆಸುತ್ತಿದ್ದ ಕೂಂಬಿಂಗ್ ಸ್ಥಗಿತಗೊಳಿಸಲಾಗಿದೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd