ನಿಜವಾದ ದೈವದ ಮಾತು – 300 ವರ್ಷಗಳ ಹಿಂದಿನ ದೈವದ ಆಭರಣ ಪತ್ತೆ

1 min read
divine jewelry

ನಿಜವಾದ ದೈವದ ಮಾತು – 300 ವರ್ಷಗಳ ಹಿಂದಿನ ದೈವದ ಆಭರಣ ಪತ್ತೆ

ಕಿನ್ನಿಗೋಳಿ, ಮಾರ್ಚ್11: ತುಳುನಾಡು ದೈವ ದೇವರ ನೆಲೆಬೀಡು. ತುಳುವ ಸಂಸ್ಕೃತಿಯ ಮೂಲ ಬೇರುಗಳಾದ ದೈವಾರಾಧನೆ/ಭೂತಾರಾಧನೆ, ನಾಗಾರಾಧನೆ ಮತ್ತು ಸಿರಿ ಆರಾಧನೆ ವೈಧಿಕ ಸಂಸ್ಕೃತಿಯನ್ನೂ ಮೀರಿ ತುಳುವರನ್ನು ಆವರಿಸಿಕೊಂಡಿರುವಂತಹದ್ದು. ತಮ್ಮ ಕಷ್ಟದ ಸಂಧರ್ಭದಲ್ಲಿ ದೈವಗಳು ತಮ್ಮೊಂದಿಗೆ ಇದ್ದು, ನಮ್ಮ ಅಳಲಿಗೆ ಸ್ಪಂದಿಸುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು.
divine jewelry

ಇದೀಗ ದೈವದ ಪವಾಡವೆಂಬಂತೆ ಮುಚ್ಚಿಹೋದ ಬಾವಿಯಲ್ಲಿ ಸುಮಾರು 300 ವರ್ಷಗಳ ಹಿಂದಿನ ದೈವದ ಪರಿಕರಗಳು ಪತ್ತೆಯಾಗಿದೆ.
ಕಿನ್ನಿಗೋಳಿ ಸಮೀಪದ ಬಳ್ಕುಂಜೆಯ ಮೂಡಾಯಿಗುತ್ತು ಮನೆಗೆ ಸೇರಿದ್ದ ಜಮೀನಿನಲ್ಲಿ ಮುಚ್ಚಿಹೋಗಿದ್ದ ಬಾವಿಯಲ್ಲಿ 300 ವರ್ಷಗಳಷ್ಟು ಹಳೆಯ ದೈವದ ಮೂರ್ತಿ, ಪೂಜಾ ಪರಿಕರಗಳು ಪತ್ತೆಯಾಗಿವೆ.

ಈ ಜಾಗದಲ್ಲಿ ಹಲವು ದೈವಗಳು ನೆಲೆ ನಿಂತಿದ್ದು, ಮೂಡುಗುತ್ತು ಕುಟುಂಬದ ಹಿರಿಯರು ಹಿಂದೆ ಪೂಜೆ ಪುನಸ್ಕಾರಗಳನ್ನು ನಡೆಸುತ್ತಿದ್ದರು.
ಕಾಲಕ್ರಮೇಣ ಕುಟುಂಬದ ಸದಸ್ಯರು ಬೇರೆ ಬೇರೆ ನಗರಗಳಲ್ಲಿ ನೆಲೆನಿಂತಿದ್ದು, ಜಮೀನು ಪರರ ಪಾಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಈ ಕುಟುಂಬದವರು ದೈವ ದೇವರುಗಳ ನೆಲೆಯ ಜೀರ್ಣೋದ್ಧಾರ ಸಂಕಲ್ಪ ದೊಂದಿಗೆ ಅಲ್ಲಿ ಸ್ವಲ್ಪ ಜಾಗವನ್ನು ಖರೀದಿಸಿ ದೈವ ದೇವರುಗಳಿಗೆ ಸ್ಥಾನ ಕಟ್ಟಿಸಿದರು. ದೈವ ದರ್ಶನದ ವೇಳೆ ಹಿಂದೆ ಮುಚ್ಚಿ ಹೋಗಿರುವ ಬಾವಿಯನ್ನು ಅಗೆದು ನೋಡಿ ಎಂದು ದೈವ ನುಡಿ ನೀಡಿದೆ.
divine jewelry

ದೈವದ ನುಡಿಯಂತೆ ಮುಚ್ಚಿ ಹೋದ ಬಾವಿಯನ್ನು ಮತ್ತೆ ತೋಡಿದಾಗ ಬಾವಿಯಲ್ಲಿ 300 ವರ್ಷಗಳ ಹಿಂದಿನ ದೈವದ ಮೂರ್ತಿ, ಆಭರಣ, ಕತ್ತಿ, ದೈವದ ಮಂಚ ಮತ್ತಿತರ ಪರಿಕರಗಳು ಲಭಿಸಿವೆ.
ಇದೀಗ ದೈವದ ನುಡಿ ನಿಜವಾಗಿದ್ದು ಕುಟುಂಬವರ್ಗ ಮಾತ್ರವಲ್ಲದೆ ಊರವರಿಗೂ ವಿಸ್ಮಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ದೈವದರ್ಶನ ಮಾಡಿ ದೈವದ ಆಜ್ಞೆಯಂತೆ ಮುಂದುವರಿಯಲು ಕುಟುಂಬ ವರ್ಗ ಸಿದ್ಧತೆ ನಡೆಸಿದೆ.‌

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd