ADVERTISEMENT
Monday, November 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಯಕ್ಷಗಾನದ ಹಿನ್ನೆಲೆ ಮತ್ತು ಮಾನವೀಯ ಮೌಲ್ಯಗಳ ‘ದೇವಿ ಮಹಾತ್ಮೆ’ ಚಿತ್ರದ ಟ್ರೇಲರ್ ಬಿಡುಗಡೆ

admin by admin
November 23, 2026
in Cinema, Newsbeat, ಮನರಂಜನೆ
devi-mahathme-kannada-movie-trailer-release-rangayana-raghu-yakshagana

devi-mahathme-kannada-movie-trailer-release-rangayana-raghu-yakshagana

Share on FacebookShare on TwitterShare on WhatsappShare on Telegram

ಬೆಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನದ ಹಿನ್ನೆಲೆ, ಕುಂದಾಪುರದ ಭಾಷಾ ಸೊಗಡು ಹಾಗೂ ಮಾನವೀಯ ಸಂಬಂಧಗಳ ಸುತ್ತ ಹೆಣೆಯಲಾಗಿರುವ ಬಹುನಿರೀಕ್ಷಿತ ‘ದೇವಿ ಮಹಾತ್ಮೆ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಯುವಿಜಿ ಸ್ಟುಡಿಯೋ (UVG Studio) ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿ ರಾಜನ್ ನಿರ್ಮಿಸಿರುವ ಈ ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಆಕ್ಷನ್-ಕಟ್ ಹೇಳಿದ್ದು, ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಸಿನಿಮಾದ ವಿಶೇಷತೆ ಹಾಗೂ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಂಗಾಯಣ ರಘು, ತಮ್ಮ ಪಾತ್ರ ಮತ್ತು ಕುಂದಾಪುರ ಭಾಷೆಯ ಸವಾಲಿನ ಬಗ್ಗೆ ಮನಬಿಚ್ಚಿ ಮಾತನಾಡಿದರು. “ನನಗೆ ಚಿಕ್ಕಂದಿನಿಂದಲೂ ‘ದೇವಿ ಮಹಾತ್ಮೆ’ ಜೊತೆ ಭಾವನಾತ್ಮಕ ನಂಟಿದೆ, ನಮ್ಮ ಊರಿನಲ್ಲಿ ನಮ್ಮ ತಂದೆ ದೇವಿ ಪಾತ್ರ ಮಾಡುತ್ತಿದ್ದರು. ಈ ಚಿತ್ರದಲ್ಲಿ ನಾನು ‘ಶಂಕರ್’ ಎಂಬ ಪಾತ್ರ ಮಾಡಿದ್ದೇನೆ. ಕುಂದಾಪುರ ಭಾಷೆ ನನಗೆ ಹೊಸದಾಗಿತ್ತು. ಅಲ್ಲಿನ ಸೆಕೆ ಹಾಗೂ ಸಮುದ್ರದ ಒಳಗೆ 5-6 ಕಿಲೋಮೀಟರ್ ಹೋಗಿ ಚಿತ್ರೀಕರಣ ಮಾಡಿದ್ದು ಮರೆಯಲಾಗದ ಅನುಭವ” ಎಂದು ರಂಗಾಯಣ ರಘು ಹೇಳಿದರು.

Related posts

navu-thumba-olleyavaru-kannada-movie-songs-launch-ayush-malli-north-karnataka

ಉತ್ತರ ಕರ್ನಾಟಕದ ಸೊಗಡಿನೊಂದಿಗೆ ‘ನಾವು ತುಂಬಾ ಒಳ್ಳೆಯವರು’ ಚಿತ್ರತಂಡ: ಬಾಲಕಲಾವಿದರಿಂದ ಹಾಡುಗಳ ಲೋಕಾರ್ಪಣೆ

November 23, 2026
jio-happy-new-year-offer-unlimited-4g-5g-data-399-plan

ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್’: ₹399ಕ್ಕೆ ಅನಿಯಮಿತ 4G-5G ಡೇಟಾ

November 23, 2026

ನಿರ್ಮಾಪಕ ಗಾಂಧಿರಾಜನ್ ಅವರ ಸಿನಿಮಾ ಪ್ರೀತಿಯನ್ನು ಶ್ಲಾಘಿಸಿದ ರಂಗಾಯಣ ರಘು, “ತಮಿಳರಾದರೂ ಕನ್ನಡಿಗರೇ ಆಗಿ ಹೋಗಿರುವ ಗಾಂಧಿರಾಜನ್ ಅವರಿಗೆ ಒಳ್ಳೆಯ ಸಿನಿಮಾ ಮಾಡಬೇಕೆಂಬ ತುಡಿತ ಇದ್ದಿದ್ದರಿಂದ ‘ದೇವಿ ಮಹಾತ್ಮೆ’ಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಗೆಯೇ ನಮ್ಮ ಸಂಚಾರಿ ಥಿಯೇಟರ್‌ನ ಹುಡುಗರು ಇಂದು ನಿರ್ದೇಶಕ, ನಿರ್ಮಾಪಕರಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ. ಇಲ್ಲಿ ಕಲಾವಿದರ ಅಭಿನಯವೇ ನಿಜವಾದ ಅಲಂಕಾರವಾಗಿದ್ದು, ಎಸ್.ಕೆ. ರಾವ್ ಅವರ ಛಾಯಾಗ್ರಹಣ ಕರಾವಳಿಯ ಗಾಳಿ, ಬಿಸಿಲನ್ನು ಅಷ್ಟೇ ಸುಂದರವಾಗಿ ಸೆರೆಹಿಡಿದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ನಾಗರಾಜ್ ಸೋಮಯಾಜಿ, “ಇದು ಕೇವಲ ದೇವಿ ಮಹಾತ್ಮೆಯ ಕಥೆಯಲ್ಲ, ಬದಲಾಗಿ ದೇವಿ ಮಹಾತ್ಮೆ ಆಡಿಸುವವನ ಕಥೆ. 2000ನೇ ಇಸವಿಯ ಕಾಲಘಟ್ಟದಲ್ಲಿ ನಡೆಯುವ ಈ ಕಥೆಯಲ್ಲಿ ಮನುಷ್ಯ ಸಂಬಂಧಗಳು ಮತ್ತು ವಾಸ್ತವ ಬದುಕಿನ ಭಾವನೆಗಳಿವೆ. ಚಿತ್ರದಲ್ಲಿ ರಂಗಾಯಣ ರಘು ಅವರು ಯಾವುದೇ ವೇಷ ಹಾಕಿಲ್ಲ, ಮಹಿಷಾಸುರನ ಪಾತ್ರವನ್ನು ನಂದೀಶ್‌ ಜನ್ನಾಡಿ ಅವರು ನಿರ್ವಹಿಸಿದ್ದು, ಯಕ್ಷಗಾನದ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ತೋರಿಸಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ತಮ್ಮ ಸಿನಿಮಾ ಸಿದ್ಧಾಂತದ ಬಗ್ಗೆ ವಿವರಿಸಿದ ನಿರ್ದೇಶಕರು, “ನನಗೆ ಮಾನವೀಯ ಮೌಲ್ಯಗಳ ಕಥೆಗಳೆಂದರೆ ಬಹಳ ಇಷ್ಟ. ಕಮರ್ಷಿಯಲ್ ಅಂಶಗಳಿಗಾಗಿ ಅನಾವಶ್ಯಕ ಫೈಟ್ ಅಥವಾ ಮಸಾಲೆ ಸೇರಿಸಲು ನನ್ನ ಮನಸ್ಸು ಒಪ್ಪುವುದಿಲ್ಲ. ನಾನು ಏನು ನಂಬಿದ್ದೇನೋ ಅದನ್ನೇ ಪ್ರಾಮಾಣಿಕವಾಗಿ ತೆರೆಯ ಮೇಲೆ ತಂದಿದ್ದೇನೆ” ಎಂದರು. ನಾಗರಾಜ್ ಸೋಮಯಾಜಿ, ಅರವಿಂದ ಕುಪ್ಳಿಕರ್, ವಾದಿರಾಜ್ ಶೆಟ್ಟಿ ಹಾಗೂ ಗುರು ಆರ್ಯ ಅವರ ಬರವಣಿಗೆ ಈ ಚಿತ್ರಕ್ಕಿದೆ. ಸಂಭಾಷಣೆಯನ್ನು ಭಾಸ್ಕರ್ ಬಂಗೇರ-ನಾಗರಾಜ್ ಸೋಮಯಾಜಿ ಅವರು ಬರೆದಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು ಅವರೊಂದಿಗೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿ.ಡಿ. ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್, ರಘು ಪಾಂಡೇಶ್ವರ, ಪಲ್ಲವಿ ಮಂಜುನಾಥ್ ಹಾಗೂ ಶೈಲಶ್ರೀ ಮೂಲ್ಕಿ ಸೇರಿದಂತೆ ದೊಡ್ಡ ಕಲಾವಿದರ ಬಳಗವಿದೆ. ಲಿಕಿತ್ ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಉಜ್ವಲ್ ಚಂದ್ರ ಸಂಕಲನವಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾ ಡಿಸೆಂಬರ್‌ 4ರಂದು ತೆರೆಕಾಣಲಿದೆ.

ShareTweetSendShare
Join us on:

Related Posts

navu-thumba-olleyavaru-kannada-movie-songs-launch-ayush-malli-north-karnataka

ಉತ್ತರ ಕರ್ನಾಟಕದ ಸೊಗಡಿನೊಂದಿಗೆ ‘ನಾವು ತುಂಬಾ ಒಳ್ಳೆಯವರು’ ಚಿತ್ರತಂಡ: ಬಾಲಕಲಾವಿದರಿಂದ ಹಾಡುಗಳ ಲೋಕಾರ್ಪಣೆ

by admin
November 23, 2026
0

ಬೆಂಗಳೂರು: ‘ಪಪ್ಪಿ’ ಚಿತ್ರದ ಮೂಲಕ ಸಿನಿಪ್ರಿಯರನ್ನು ಉತ್ತರ ಕರ್ನಾಟಕದತ್ತ ಸೆಳೆದಿದ್ದ ನಿರ್ದೇಶಕ ಆಯುಷ್ ಮಲ್ಲಿ, ಇದೀಗ ಮತ್ತೊಂದು ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಪಪ್ಪಿ’...

jio-happy-new-year-offer-unlimited-4g-5g-data-399-plan

ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್’: ₹399ಕ್ಕೆ ಅನಿಯಮಿತ 4G-5G ಡೇಟಾ

by admin
November 23, 2026
0

* ಹೊಸ ಫ್ಲಾಗ್ ಶಿಪ್ ಯೋಜನೆ ₹399 ದರ, 28 ದಿನಗಳ ಡೇಟಾ ಮಿತಿ ಇಲ್ಲ; ವಾಯ್ಸ್ ಕರೆ ಕೂಡ ಉಚಿತ * ವರ್ಷಪೂರ್ತಿ ಅನಿಯಮಿತ 4G-5G...

r-ashoka-raises-concern-tungabhadra-water-rice-price-hike-karnataka

ದಿವಾಳಿ ಸರ್ಕಾರದ ಬಾಕಿಗೆ ಹೆದರಿ ಯಾವ ಔಷಧ ಕಂಪನಿಗಳು ಸರಬರಾಜು ಮಾಡಲು ಮುಂದೆ ಬರುತ್ತಿಲ್ಲ!

by admin
November 23, 2026
0

ಇದು ಪಾಪರ್ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಎಫೆಕ್ಟ್! ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಜೀವರಕ್ಷಕ ಔಷಧಗಳು ಮತ್ತು ಉಪಕರಣಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರೈಸಿದ ಔಷಧಗಳ ಬಿಲ್‌ಗಳಿಗೆ...

r-ashoka-congress-asha-workers-honorarium-protest-karnataka-government

ಚುನಾವಣೆಗೆ ಮುನ್ನ ಗೌರವಧನ ಹೆಚ್ಚಳದ ಭರವಸೆ, ಆಶಾ ಕಾರ್ಯಕರ್ತೆಯರಿಗೆ ಮೋಸ ಮಾಡಿದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
November 23, 2026
0

ಕಾಂಗ್ರೆಸ್‌ ಸಮಿತಿಗಳಿಗೆ ಕೋಟ್ಯಂತರ ಖರ್ಚು, ರೈತರಿಗೆ ಆಶಾ ಕಾರ್ಯಕರ್ತೆಯರಿಗೆ ಹಣವಿಲ್ಲ ಬೆಂಗಳೂರು, ನವೆಂಬರ್‌ 23 ಚುನಾವಣೆಗೆ ಮುನ್ನ ಕಾಂಗ್ರೆಸ್‌ ನಾಯಕರು ಆಶಾ ಕಾರ್ಯಕರ್ತೆಯರನ್ನು ಕರೆದು ಮಾತಾಡಿ ಗೌರವಧನ...

melukote-darshan-puttannaiah-agriculture-dairy-farming-facility-distribution

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕೃಷಿ-ಹೈನುಗಾರಿಕೆಗೆ ಹೊಸ ಚೈತನ್ಯ

by admin
November 23, 2026
0

  ಮಂಡ್ಯ: ರೈತರನ್ನು ಆರ್ಥಿಕವಾಗಿ ಸ್ವಾವಲಂಬಿ ಮತ್ತು ಸದೃಢರನ್ನಾಗಿ ಮಾಡಲು ಕಟಿಬದ್ಧರಾಗಿರುವ ಮೇಲುಕೋಟೆ ಕ್ಷೇತ್ರದ ಶಾಸಕ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರ ನಿರಂತರ ಶ್ರಮದಿಂದ ಕ್ಷೇತ್ರದಲ್ಲಿ ಕೃಷಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram