ಬೇವಿನ ಮರದಲ್ಲಿ ಜಿನುಗಿದ ಹಾಲಿನ ರೂಪದ ದ್ರವ, ಭಕ್ತರಿಂದ ಪೂಜೆ
ಬೇವಿನ ಮರದಿಂದ ಹಾಲಿನ ರೂಪದ ದ್ರವ ಜಿನುಗುತ್ತಿದ್ದು ದೇವರ ಪವಾಡ ಎಂದು ನಂಬಿದ ಭಕ್ತರು ಜನ ನಾಮುಂದು ತಾಮುಂದು ನೋಡಲು ಮುಗಿಬಿದ್ದಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೋಕಿನ ಬಿಜಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಿಜಕಲ್ ಗ್ರಾಮದ ಗೋಪಾಲ್ ರಾವ್ ದೇಸಾಯಿ ಎಂಬುವವರಿಗೆ ಸೇರಿದ ಹೊಲದಲ್ಲಿ ಗದ್ದಿ ದ್ಯಾವಮ್ಮ ಎಂಬ ದೇವರಿಗೆ ಮೀಸಲಾಗಿರಿಸಿದ್ದ ಮರದಲ್ಲಿ ಹಾಲಿನ ರೂಪದ ದ್ರವ ಮನರದಿಂದ ಜಿನುಗುತ್ತಿದೆ, ಇದನ್ನ ನೋಡಲು ಹಳ್ಳಿಯ ಜನರೆಲ್ಲರೂ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಇದನ್ನ ಪವಾಡ ಎಂದು ನಂಬಿ ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಇದು ಏನಾದರೂ ಭವಿಷ್ಯದ ಮುನ್ಸೂಚನೆಯೇ ಎಂದು ಜೋತಿಷಿಗಳನ್ನ ಕೇಳಿದ್ದಾರೆ. ಜ್ಯೂತಿಷಿಗಳು ಇದರಿಂದ ಒಳಿತಾಗುತ್ತೆ ಪೂಜಿಸಿ ಎಂದಿದ್ದಾರೆ ಜನರು ಸಹ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ.
ಈ ವಿಸ್ಮಯವನ್ನ ನೋಡಲು ಪಕ್ಕದೂರಿನ ಜನರು ಸಹ ಬರುತ್ತಿರುವುದರಿಂದ ಹೊಲದಲ್ಲಿ ಟೆಂಟ್ ಹಾಕಿ ನೆರಳಿನ ವ್ಯವಸ್ಥೆ ಸಹ ಮಾಡಲಾಗಿದೆ. ಅಲ್ಲದೆ ಭಕ್ತರಿಗೆ ಪ್ರಸಾದ ಸಹ ಹಂಚಲಾಗುತ್ತಿದೆ.








