Dhanushka gunatilaka : ಲೈಂಗಿಕ ದೌರ್ಜನ್ಯ ಪ್ರಕರಣ : ಧನುಷ್ಕಾ ಗುಣತಿಲಕಾಗೆ ಜಾಮೀನು
ಲೈಂಗಿಕ ಕಿರುಕುಳದ ಪ್ರಕರಣದ ಆರೋಪ ಎದುರಿಸುತ್ತಿದ್ದ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕಾಗೆ ಕೊನೆಗೂ ಜಾಮೀನು ಸಿಕ್ಕಿದೆ. ಲಂಕಾ ಸೆಂಟ್ರಲ್ ಸ್ಥಳೀಯ ನ್ಯಾಯಾಲಯ ಧನುಷ್ಕಾ ಗುಣತಿಲಕ ಪರ ಅಲ್ಲಿನ ಸರ್ಕಾರ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ 150,000 ಡಾಲರ್ ನೀಡಿ ಜಾಮೀನು ದೊರಕಿಸಲಾಗಿದೆ. ಮುಂದಿನ ವಿಚಾರಣೆ ಜ.12ಕ್ಕೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಸಿಡ್ನಿ ಪೊಲೀಸರು ನ.2ರಂದು 29 ವರ್ಷದ ಮಹಿಳೆ ಮೇಲೆ ಧನುಷ್ಕಾ ಗುಣತಿಲಕ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದರು.
ನ.6ರಂದು ಧನುಷ್ಕಾ ಗುಣ ತಿಲಕ ಅವರನ್ನು ಪೊಲೀಸರು ಬಂಧಿಸಿದರು. ನ.7ರಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ಜಾಮೀನು ಕೊಡು ನಿರಾಕರಿಸಿತು.
ಧನುಷ್ಕಾ ಗುಣತಿಲಕ ಪರ ಡಿಫೆನ್ಸ್ ಬಾರ್ರಿಸ್ಟರ್ ಮುರುಗನ್ ತಂಗರಾಜ್ ವಾದ ಮಾಡಿದರು. ಈ ಆಟಗಾರನನ್ನು ಲಂಕಾ ಕ್ರಿಕೆಟ್ ಮಂಡಳಿ ಹಾಗೂ ಶ್ರೀಲಂಕಾ ಸರ್ಕಾರ ಬೆಂಬಲಿಸುತ್ತದೆ. ನೀವು ಜಾಮೀನು ಕೊಡದಿದ್ದರೆ ಈ ಆಟಗಾರನ ವೃತ್ತಿ ಬದುಕಿಗೆ ತೊಂದರೆಯಾಗುತ್ತದೆ ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟರು.
ಡಿ.8ಕ್ಕೆ ಜಾಮೀನು ವಿಚಾರವಾಗಿ ಇಲ್ಲಿನ ಎನ್ಎಸ್ಡಬ್ಲ್ಯು ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆಗೆ ಬರಳಿದೆ.