U/A ಸರ್ಟಿಫಿಕೆಟ್ ಪಡೆದ ‘ನಿನ್ನ ಸನಿಹಕೆ’ ಸಿನಿಮಾ..!
ಅಣ್ಣವ್ರ ಮೊಮ್ಮಗಳು ಧನ್ಯಾರಾಮ್ ಚೊಚ್ಚಲ ಸಿನಿಮಾವಾದ ‘ನಿನ್ನ ಸನಿಹಕೆ’ ಭಾರೀ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಈ ಸಿನಿಮಾ ಮೂಲಕ ಡಾ. ರಾಜ್ ಕುಮಾರ್ ಮೊಮ್ಮಗಳು ಧನ್ಯಾರಾಮ್ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ನಿನ್ನ ಸನಿಹಕೆ ಸಿನಿಮಾಗೆ ಸೂರಜ್ ಗೌಡ ಆಕ್ಷನ್ ಕಟ್ ಹೇಳ್ತಿದ್ದು, ನಟಿಸಿದ್ದಾರೆ. ಅವರಿಗೂ ಸಹ ಇದು ಮೊದಲ ಸಿನಿಮಾ ಆಗಿದೆ. ರಘು ದೀಕ್ಷಿತ್ ಸಂಗೀತ ಸಂಯೋಜನೆ ಇರೋ ಈ ಚಿತ್ರದ ಹಾಡುಗಳು ಈಗಾಗ್ಲೇ ಕನ್ನಡ ಸಿನಿಪ್ರಿಯರ ಮನ ಸೆಳೆದಿದೆ.
ಈ ಸಿನಿಮಾ ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿ ಇಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಸೆನ್ಸಾರ್ ಮಂಡಳಿಯ ಸದಸ್ಯರು ಈ ಸಿನಿಮಾ ಬಗ್ಗೆ ವಿಶೇಷವಾದ ಪ್ರಶಂಸೆಯನ್ನ ನೀಡಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ದೊಡ್ಮನೆಯ ಕುಡಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿರುವುದಕ್ಕೆ ಅಣ್ಣವ್ರ ಕುಟುಂಬಸ್ಥರು ಫಫುಲ್ ಖುಷ್ ಆಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ಧನ್ಯಾರಾಮ್ ಚಿತ್ರರಂಗ ಪ್ರವೇಶದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾ ಏಪ್ರಿಲ್ 16ಕ್ಕೆ ತೆರೆಗೆ ಬರ್ತಿದೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ಚಿತ್ರಕ್ಕೆ ಬಂಡವಾಳ ಹೂಡಿದಿದ್ದಾರೆ.
ವೆಡ್ಡಿಂಗ್ ಫೋಟೋ ಶೂಟ್ ಕರ್ಮಕಾಂಡ..! ಕೈಯಲ್ಲಿ ಬಾಟ್ಲಿ ಸಿಗರೇಟ್ ಹಿಡಿದ ವಧು ವಿರುದ್ಧ ಆಕ್ರೋಶ..!
ಭಾರತದಲ್ಲಿ 5 ದಿನಗಳಲ್ಲೇ ಕೋಟಿ ಕೋಟಿ ಬಾಚಿದೆ ವಿದೇಶಿ ಸಿನಿಮಾ..! ಆದ್ರೂ ನಿರೀಕ್ಷೆಯ ಹುಸಿಯಾಗಿದೆ…!
ಹಾಲಿವುಡ್ ಗೆ ಹಾರಿದ ಮತ್ತೊಬ್ಬ ಭಾರತೀಯ ಹಾಟ್ ನಟಿ..!