dharam veer paul team india’s 12th player ಟೀಂ ಇಂಡಿಯಾದ 12ನೇ ಆಟಗಾರನ ಬಗ್ಗೆ ನಿಮಗೆ ಗೊತ್ತಾ..?
ಧರಮ್ ವೀರ್ ಪಾಲ್….!! ಈತ ಭಾರತ ಕ್ರಿಕೆಟ್ ತಂಡದ ಅನಧಿಕೃತ 12ನೇ ಆಟಗಾರ..!! ಹೌದು..! ಮಧ್ಯಪ್ರದೇಶದ ಧರಮ್ ವೀರ್ ಪಾಲ್ ಹುಟ್ಟುವಾಗಲೇ ಪೋಲಿಯೊಗೆ ತುತ್ತಾಗಿದ್ದರು. ಆದ್ರೆ ಕ್ರಿಕೆಟ್ ಅಂದ್ರೆ ಧರಮ್ ವೀರ್ ಪಾಲ್ ಗೆ ಪಂತ ಪ್ರಾಣ. ಅಂಗವೈಕಲ್ಯ ನನಗೆ ಇಷ್ಟವಾದ ಕ್ರಿಕೆಟ್ ನಿಂದ ಎಂದೂ ದೂರ ಮಾಡಲು ಸಾಧ್ಯವಿಲ್ಲ ಎನ್ನುವ ಧರಮ್ ವೀರ್ ಪಾಲ್ ಟೀಂ ಇಂಡಿಯಾ ಆಡುವ ಪ್ರತಿಯೊಂದು ಪಂದ್ಯಕ್ಕೂ ಬರುತ್ತಾರೆ. ಜೊತೆಗೆ ಧರಮ್ ವೀರ್ ಗೆ ಟೀಂ ಇಂಡಿಯಾದ ಹಲವು ಆಟಗಾರರೊಂದಿಗೆ ಪರಿಚಯವಿದೆ.

ಈ ವಿಚಾರವನ್ನು 2017ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಧರಂವೀರ್ ಹೇಳಿಕೊಂಡಿದ್ದಾರೆ. ಧರಮ್ ವೀರ್ ಹೇಳಿದ್ದಂತೆ ಅವರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಎಂಎಸ್ ಧೋನಿ, ಯುವರಾಜ್ ಸಿಂಗ್, ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರಂತೆ. ಅಲ್ಲದೇ ಈ ಆಟಗಾರರು ನನಗೆ ಹಲವು ಬಾರಿ ಸಹಾಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ ಧರಮ್ ವೀರ್ ಪಾಲ್ ಮಧ್ಯಪ್ರದೇಶ ವಿಶೇಷಚೇತನರ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.
ಟೀಂ ಇಂಡಿಯಾದ ಪ್ರತಿ ಪಂದ್ಯಕ್ಕೆ ಹಾಜರಾಗುವ ಹಿನ್ನೆಲೆಯಲ್ಲಿ ಧರಮ್ ವೀರ್ ಅವರನ್ನು ಟೀಂ ಇಂಡಿಯಾದ 12ನೇ ಅನಧಿಕೃತ ಆಟಗಾರ ಎಂದು ಕರೆಯಲಾಗುತ್ತದೆ.
ಇನ್ನು ಮೊಹಾಲಿಯಲ್ಲಿ ನಡೆದ ಟೆಸ್ಟ್ ಪಂದ್ಯಕ್ಕೂ ಧರಮ್ ವೀರ್ ಆಗಮಿಸಿದ್ದರು. ಮೊಹಾಲಿಯಲ್ಲಿ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ಬಸ್ ಹತ್ತಲು ಸಿದ್ಧವಾಗಿತ್ತು. ಅದೇ ಸಮಯಕ್ಕೆ ಧರಮ್ ವೀರ್ ಪಾಲ್ ಬಸ್ಸಿನ ಹತ್ತಿರ ಬಂದರು.
ಇದನ್ನು ಗಮನಿಸಿದ ಕೊಹ್ಲಿ ಬಸ್‌ನಿಂದ ಕೆಳಗಿಳಿದು ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಧರಮ್ ವೀರ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ “ಥ್ಯಾಂಕ್ಯೂ ಸೋ ಮಚ್ ಚಾಂಪಿಯನ್. ನೀನು ಯಾವತ್ತೂ ನನ್ನ ಚಾಂಪಿಯನ್ ಎಂದು ಬರೆದುಕೊಂಡಿದ್ದಾರೆ.
dharam veer paul team india’s 12th player









