ಧಾರವಾಡ : ರಸ್ತೆ ಕಾಮಗಾರಿಯಲ್ಲೂ 40% ಆರೋಪ
ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.. ಅಲ್ಲದೇ ರಸ್ತೆ ಕಾಮಗಾರಿಯಲ್ಲಿ 40% ಆರೋಪ ಕೇಳಿಬರುತ್ತಿದೆ..
3 ಕಿಮೀ ಉದ್ದದ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಜನರು ಆಕ್ರೋಶ ಹೊರಹಾಕ್ತಿದ್ದಾರೆ..
2.88 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರೋ ಕಾಮಗಾರಿ ಇದಾಗಿದೆ..
ಹುಬ್ಬಳ್ಳಿಯ ಕ್ಲಾಸ್ ಒನ್ ಗುತ್ತಿಗೆದಾರ ಎನ್ ಎಸ್ ನಾಯಕ್ ಗೆ ರಸ್ತೆ ಗುತ್ತಿಗೆ ನೀಡಲಾಗಿದೆ..
ಗುತ್ತಿಗೆ ಪಡೆದು ಬೇಕಾಬಿಟ್ಟಿ ರಸ್ತೆ ಕಾಮಗಾರಿ ಮಾಡುತ್ತಿರೋ ಆರೋಪ ಕೇಳಿಬಂದಿದೆ..
ಮ್ಯಾನೇಜರ್ ನೇತೃತ್ವದ ಮೂಲಕವೇ ರಸ್ತೆ ಕಾಮಗಾರಿ ನಡೆಯುತ್ತಿದ್ದು ,
ಬೇಕಾಬಿಟ್ಟಿ ಟಾರು ಹಾಕಿ ರಸ್ತೆ ಮಾಡುತ್ತಿರೋ ಆರೋಪ ಕೇಳಿಬರುತ್ತಿದೆ..
ರಸ್ತೆಗೆ 2 ಇಂಚಿನ ಟಾರು ಹಾಕದೆ, ಕೇವಲ ಒಂದೇ ಇಂಚು ಟಾರು ಹಾಕಲಾಗಿದೆ ಎಂದು ರಸ್ತೆ ತಡೆದು ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದಾರೆ..
Dharawad , Road Construction , saakshatv







