ಧರ್ಮಸ್ಥಳ ಪ್ರಕರಣದಲ್ಲಿ SIT ವಿಚಾರಣೆಗೆ ಹಾಜರಾಗಿದ್ದ ಯೂಟ್ಯೂಬರ್ ಸಮೀರ್.M.D ಮತ್ತೊಂದು ಹೊಸ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಮೀರ್, ಬ್ಯಾಂಕ್ ಖಾತೆಯ ದಾಖಲೆಗಳನ್ನು ಹಂಚಿಕೊಂಡಿದ್ದಾರೆ.
ಅವರು ವಿಡಿಯೋದಲ್ಲಿ, ನನಗೆ ವಿದೇಶಗಳಿಂದ ಯಾವುದೇ ರೀತಿಯ ಫಂಡ್ ಬಂದಿಲ್ಲ. ಇಸ್ಲಾಂ ದೇಶಗಳಿಂದ ಅಥವಾ ಟೆರರಿಸ್ಟ್ ನಿಂದ ಕೋಟ್ಯಂತರ ಹಣ ಬಂದಿದೆ ಎಂಬುದು ಸಂಪೂರ್ಣ ಸುಳ್ಳು. ನಾನು ಮುಸ್ಲಿಂ ಆಗಿರುವ ಕಾರಣಕ್ಕೆ ಮಾತ್ರ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಯಾವುದೇ ವಿದೇಶಿ ಹಣ ನನ್ನ ಖಾತೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ತಮ್ಮ ವಿರುದ್ಧ ಹಬ್ಬುತ್ತಿರುವ ಸುಳ್ಳು ಸುದ್ದಿಗಳನ್ನು ಜನರು ನಂಬಬಾರದು ಎಂದು ವಿನಂತಿಸಿರುವ ಸಮೀರ್, ತನಿಖಾ ಸಂಸ್ಥೆಗಳಿಗೆ ಸಹಕರಿಸುತ್ತಿರುವುದಾಗಿ ಹೇಳಿದ್ದಾರೆ.
ಈ ಪ್ರಕರಣ ಇನ್ನೂ ತನಿಖೆಯಲ್ಲಿದ್ದು, SIT ವರದಿ ಬಳಿಕ ಇನ್ನಷ್ಟು ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.








