ಐಪಿಎಲ್ ನಲ್ಲಿ ಗಬ್ಬರ್ ಸಿಂಗ್ ದರ್ಬಾರ್ : ಧವನ್ ದಾಖಲೆಯ `ಶಿಖರ’
ದುಬೈ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಶಿಖರ್ ಧವನ್ ಹೈದರಾಬಾದ್ ವಿರುದ್ಧ ತಮ್ಮ ಗಬ್ಬರ್ ಸಿಂಗ್ ಆಟ ಮುಂದುವರೆಸಿದ್ದಾರೆ.
ಬುಧವಾರ ನಡೆದ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಧವನ್ ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು 1 ಸಿಕ್ಸರ್ ನೆರವಿನಿಂದ 42 ರನ್ ಬಾರಿಸಿದರು. ಇದರೊಂದಿಗೆ ಐಪಿಎಲ್ ನಲ್ಲಿ ಧವನ್ ಅಪರೂಪದ ದಾಖಲೆ ಬರೆದಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 42 ರನ್ ಬಾರಿಸುವ ಮೂಲಕ ಧವನ್, ಈ ಆವೃತ್ತಿಯಲ್ಲಿ 400 ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದಷ್ಟೇ ಅಲ್ಲದೇ ಸತತ 6ನೇ ಬಾರಿಗೆ ಐಪಿಎಲ್ನಲ್ಲಿ 400+ ರನ್ ಬಾರಿಸಿದ ಮೂರನೇ ಬ್ಯಾಟ್ಸ್ಮನ್ ಎನ್ನುವ ಕೀರ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಒಟ್ಟಾರೆ ಐಪಿಎಲ್ ನಲ್ಲಿ ಶಿಖರ್ ಧವನ್ ಈವರೆಗೂ 8ನೇ ಬಾರಿಗೆ 400+ ರನ್ ಬಾರಿಸಿದ್ದಾರೆ.
ಇದರೊಂದಿಗೆ ವಾರ್ನರ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.