Dhoni finishes off in style. A magnificent strike into the crowd! India lift the World Cup after 28 years!- Ravi Shastri

1 min read

ಕಂಚಿನ ಕಂಠದ ಡೈಲಾಗ್ ಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಎಂದೆಂದಿಗೂ ರೋಮಾಂಚನಗೊಳಿಸುತ್ತವೆ. ಹಾಗಂತ ಇದು ಯಾವುದೇ ಸಿನಿಮಾದ ಡೈಲಾಗ್ ಅಲ್ಲ. ಆ ಕ್ಷಣದಲ್ಲಿ ಹೊರಹೊಮ್ಮಿದ ಪದಪುಂಜಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
ಅಬ್ಬಾ.. ಧನ್ಯವಾದ ರವಿಶಾಸ್ತ್ರಿ.. ದಶಕದ ಹಿಂದೆ ನಿಮ್ಮ ಬಾಯಿಂದ ಬಂದ ಈ ಡೈಲಾಗ್ ಇಂದಿಗೂ ಎಂದೆಂದಿಗೂ ಮೈಮನವನ್ನು ಪುಳಕಗೊಳ್ಳುವಂತೆ ಮಾಡುತ್ತಿದೆ.

ಹೌದು, 2011ರ ವಿಶ್ವಕಪ್ ಫೈನಲ್ ಪಂದ್ಯ. ಮುಂಬೈನ ವಾಂಖೇಡೆ ಮೈದಾನದಲ್ಲಿ ಭಾರತೀಯ ಅಭಿಮಾನಿಗಳು ಪಂದ್ಯದ ಗೆಲುವನ್ನು ಎದುರು ನೋಡುತ್ತಿದ್ದರು. ಅದು 48.2 ನೇ ಓವರ್ ನಲ್ಲಿ ಲಂಕಾದ ನುವಾನ್ ಕುಲಸೇಕರ ಅವರ ಎಸೆತವನ್ನು ಸಿಕ್ಸರ್ ಆಗಿ ಧೋನಿ ಪರಿವರ್ತಿಸಿದ್ದಾಗ ಅಂದಿನ ವೀಕ್ಷಣೆ ವಿವರಣೆಕಾರ ರವಿಶಾಸ್ತ್ರಿ ಅವರು ಹೇಳಿರುವ ಮಾತುಗಳು. ಸಿನಿಮಾ ಡೈಲಾಗ್ ಗಿಂತ ಫೇಮಸ್ ಆಗಿಬಿಟ್ಟಿದೆ.

ಅಂದ ಹಾಗೇ ಟೀಮ್ ಇಂಡಿಯಾ ವಿಶ್ವ ಕಪ್ ಗೆದ್ದು ಹತ್ತು ವರ್ಷಗಳು ಕಳೆದಿವೆ. 28 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಸಂಭ್ರಮವನ್ನು ಆಗೀನ ಆಟಗಾರರು ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಯಾಕಂದ್ರೆ ಟೀಮ್ ಇಂಡಿಯಾ 2011ರ ವಿಶ್ವಕಪ್ ಗೆಲ್ಲಲೇಬೇಕು ಅಂತ ಪಣತೊಟ್ಟಿತ್ತು. 2003ರಲ್ಲಿ ಫೈನಲ್ ಬಂದ್ರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಐದು ಬಾರಿ ವಿಶ್ವಕಪ್ ನಲ್ಲಿ ಆಡಿದ್ರೂ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್‍ಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಚಿನ್ ಗೋಸ್ಕರವಾದ್ರೂ ವಿಶ್ವಕಪ್ ಗೆಲ್ಲಬೇಕು. 28 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಬೇಕು ಅನ್ನೋ ತವಕದಲ್ಲಿದ್ದ ಟೀಮ್ ಇಂಡಿಯಾದ ಆಸೆ ಕೊನೆಗೂ ಈಡೇರಿತ್ತು. ಯುವರಾಜ್ ಸಿಂಗ್, ಗೌತಮ್ ಗಂಭೀರ್, ಸೆಹ್ವಾಗ್, ಜಹೀರ್ ಖಾನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ ಹೀಗೆ ಟೀಮ್ ಇಂಡಿಯಾದ ಎಲ್ಲಾ ಆಟಗಾರರ ಕೊಡುಗೆ ಅನನ್ಯ. ತಂಡವನ್ನು ಸಂಘಟಿತವಾಗಿ ಆಡುವಂತೆ ಮಾಡಿದ್ದ ಶ್ರೇಯ ಗುರು ಗ್ಯಾರಿ ಕಸ್ಟರ್ನ್ ಸಲ್ಲಬೇಕು.

ಇದೀಗ ದಶಕದ ಸವಿ ಸವಿ ನೆನಪು ಅನ್ನು ಗುರು ಗ್ಯಾರಿ ಕಸ್ಟರ್ನ್ ಅವರು ನೆನಪು ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾವನ್ನು ವಿಶ್ವದ ಬಲಿಷ್ಠ ತಂಡವನ್ನಾಗಿಸಿದ್ದ ಹೆಗ್ಗಳಿಕೆಯ ಗೌರವವನ್ನು ಕೂಡ ಗ್ಯಾರಿ ಕಸ್ಟರ್ನ್ ಗೆ ಸಲ್ಲಿಸಬೇಕು. ಗ್ಯಾರಿ ಕಸ್ಟರ್ನ್ ಆದ ನಂತರ ಇದೀಗ ರವಿಶಾಸ್ತ್ರಿಯವರು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದಾರೆ.

ದಶಕದ ಹಿಂದಿನ ನೆನಪನ್ನು ನೆನಪಿಸಿಕೊಂಡಾಗ ತುಂಬಾನೇ ಖುಷಿಯಾಗುತ್ತಿದೆ. ನನ್ನ ಕ್ರಿಕೆಟ್ ಬದುಕಿನ ಅವಿಸ್ಮರಣೀಯ ಘಳಿಗೆಗಳಲ್ಲಿ ಇದು ಸದಾ ನೆನಪಿನಲ್ಲಿಯುತ್ತಿದೆ. ನನಗೆ ಹೆಮ್ಮೆ ಇದೆ. ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ನನಗೆ ತುಂಬಾ ಖುಷಿಯಾಗಿತ್ತು.

ಆ ದಿನಗಳ ನಂತರ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ ನಲ್ಲಿ ನೀಡುತ್ತಿರುವ ಪ್ರದರ್ಶನವ ನನ್ನ ಖುಷಿಯನ್ನು ಇಮ್ಮಡಿಗೊಳಿಸುತ್ತಿದೆ ಎಂದು ಗುರು ಗ್ಯಾರಿ ಕಸ್ಟರ್ನ್ ನೆನಪು ಮಾಡಿಕೊಂಡಿದ್ದಾರೆ.

ಇನ್ನು ಈ ವಿಶ್ವಕಪ್ ಗೆಲುವಿನಲ್ಲಿ ಟೀಮ್ ಇಂಡಿಯಾ ಆಲ್ ರೌಂಡರ್ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಕ್ಯಾನ್ಸರ್ ಅನ್ನೋ ಮಹಾಮಾರಿಯ ನೋವಿನಲ್ಲೂ ತಂಡದ ಗೆಲುವಿಗಾಗಿ ಜೀವವನ್ನೇ ಮುಡುಪಾಗಿಟ್ಟುಕೊಂಡು ಹೋರಾಟ ನಡೆಸಿದ್ದರು. 2011ರ ಟೀಮ್ ಇಂಡಿಯಾ ವಿಶ್ವಕಪ್ ಹೀರೋಗಳಿಗೆ ಸಲಾಂ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd