ಧೋನಿ ಖಿಚ್ಡಿ,,,! ಕೊಹ್ಲಿ ಖಮಾನ್…! ಕ್ರಿಕೆಟ್ ಆಟಗಾರರ ಹೆಸರಿನ ಖಾದ್ಯಗಳು…ಇದು ಮೊಟೇರಾ ಥಾಲಿ ಸ್ಪೇಷಲ್..!

1 min read
Motera thali saakshatv parthiv patel

ಧೋನಿ ಖಿಚ್ಡಿ,,,! ಕೊಹ್ಲಿ ಖಮಾನ್…! ಕ್ರಿಕೆಟ್ ಆಟಗಾರರ ಹೆಸರಿನ ಖಾದ್ಯಗಳು…ಇದು ಮೊಟೇರಾ ಥಾಲಿ ಸ್ಪೇಷಲ್..!

 

Motera thali saakshatv parthiv patelಧೋನಿ ಖಿಚ್ಡಿ,,,! ಕೊಹ್ಲಿ ಖಮಾನ್…! ಪಾಂಡ್ಯ ಪತ್ರಾ…! ಭುವನೇಶ್ಚರ್ ಭಾರ್ತಾ…! ರೋಹಿತ್ ಆಲೂ ರಶೀಲಾ…! ಶಾರ್ದೂಲ್ ಶ್ರೀಖಂಡ್…! ಬೌನ್ಸರ್ ಬಸುಂಡಿ…! ಹ್ಯಾಟ್ರಿಕ್ ಗುಜರಾತಿ ದಾಲ್..! ಬುಮ್ರಾ ಭಿಂಡಿ ಸಿಮ್ಲಾಮ್ರಿಚ್…! ಹರ್ಭಜನ್ ಹಂಡ್ವೊ…
ಅರೇ ಇದೇನೂ ಅಂತೀರಾ… ಇದು “ಮೊಟೇರಾ ಥಾಲಿ”ಯಲ್ಲಿರುವ ವಿಶೇಷ ಖಾದ್ಯಗಳು.

ಹೌದು, ಅಹಮದಾಬಾದ್ ನ ಕೋಟ್ಯಾರ್ಡ್ ಬೈ ಮರಿಯಟ್ ಪಂಚತಾರಾ ಹೊಟೇಲ್ ನಲ್ಲಿ ತಯಾರಾಗಿರುವ ವಿಶೇಷ ಖಾದ್ಯಕ್ಕೆ ಮೊಟೇರಾ ಥಾಲಿ ಅಂತ ಹೆಸರಿಡಲಾಗಿದೆ.

#Motera thali
ಐದು ಅಡಿ ಪ್ಲೇಟ್ ನಲ್ಲಿ ನೀಡುವ ಈ ಭೋಜನಕ್ಕೆ ಖ್ಯಾತ ಕ್ರಿಕೆಟಿಗರ ಹೆಸರುಗಳನ್ನು ಇಡಲಾಗಿದೆ. ಈ ಥಾಲಿಯನ್ನು ತಿನ್ನಲು ಕೆಲವೊಂದು ಕಂಡೀಷನ್ ಗಳಿವೆ. 5 ಅಡಿ ಥಾಲಿಯನ್ನು ಒಂದು ಗಂಟೆಯೊಳಗೆ ತಿಂದು ಮುಗಿಸಬೇಕು. ಇದಕ್ಕಾಗಿ ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರ ನೆರವನ್ನು ಪಡೆದುಕೊಳ್ಳಬಹುದು. ಆದ್ರೆ ನಾಲ್ವರಿಗೆ ಮಾತ್ರ ಸೀಮಿತವಾಗಿದೆ.
ಶುಚಿ ಮತ್ತು ರುಚಿಕರವಾದ ಈ ಗುಜಾರಾತಿ ಖಾದ್ಯಗಳನ್ನು ವಿಶೇಷವಾಗಿ ತಯಾರು ಮಾಡಲಾಗಿತ್ತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಗೆದ್ದ ಟೀಮ್ ಇಂಡಿಯಾ ಇತಿಹಾಸವನ್ನೇ ನಿರ್ಮಿಸಿಸಿತ್ತು. ಇದಕ್ಕಾಗಿ ಕ್ರಿಕೆಟ್ ರಾಸ್ ಉತ್ಸವವನ್ನು Motera thali saakshatv parthiv patelಹಮ್ಮಿಕೊಳ್ಳಲಾಗಿತ್ತು. ಈ ಉತ್ಸವದಲ್ಲಿ ಮೊಟೇರಾ ಥಾಲಿಯನ್ನು ಕೂಡ ಪರಿಚಯಿಸಲಾಯ್ತು. ಈ ವಿಶೇಷ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಪಾರ್ಥೀಲ್ ಪಟೇಲ್ ಗುಜರಾತಿನ ಸಂಪ್ರಾದಾಯಿಕ ಉಡುಗೆಗಳನ್ನು ಧರಿಸಿ ಮೊಟೇರಾ ಥಾಲಿಯನ್ನು ಸೇವಿಸಿದ್ದರು.
ಈ ಹಿಂದೆ ಪುಣೆಯಲ್ಲಿ ನಾಲ್ಕು ಕೆಜಿಯ ಬುಲೆಟ್ ಥಾಲಿಯನ್ನು ಕೂಡ ಪರಿಚಯಿಸಲಾಗಿತ್ತು.
ಆದ್ರೆ ಮೊಟೇರಾ ಥಾಲಿ ಸ್ವಲ್ಪ ಭಿನ್ನವಾಗಿತ್ತು. ಇಲ್ಲಿ ಬಹುತೇಕ ಖಾದ್ಯಗಳ ಹೆಸರುಗಳನ್ನು ಕ್ರಿಕೆಟ್ ಆಟಗಾರರ ಹೆಸರಿನಲ್ಲಿಡಲಾಗಿತ್ತು.
ಒಟ್ಟಾರೆ, ಇಂಗ್ಲೆಂಡ್ ಟ-ಟ್ವೆಂಟಿ ಸರಣಿಯ ವೇಳೆ ಅಹಮದಾದಾಬ್ ನ ಹೊಟೇಲ್ ನಲ್ಲಿ ಮೊಟೇರಾ ಥಾಲಿ ನೋಡುಗರ ಕಣ್ಮನ ಸೆಳೆಯಿತ್ತು.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd