IPL | ಧೋನಿ ತಲಾ.. ಕೊಹ್ಲಿ ಕಿಂಗ್.. ಧವನ್ ಟಿ 20 ಕ್ರಿಕೆಟ್ ನ ಖಲಿಫಾ
ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರನ್ ಶಿಖರ ಕಟ್ಟುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಅಜೇಯ 88 ರನ್ ಗಳಿಸಿದರು. ಇದರೊಂದಿಗೆ ಟಿ 20 ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರು.
ಹೀಗಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಶಿಖರ್ ಧವನ್ ಅವರನ್ನು ಟಿ 20 ಕ್ರಿಕೆಟ್ ನ ಖಲಿಫಾ ( ರೂಲರ್ ) ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಿಖರ್ ಧವನ್, ಧೋನಿ ತಲಾ, ಕೊಹ್ಲಿ ಕಿಂಗ್ ಆದರೆ ಶಿಖರ್ ಟಿ20 ಕಾ ಖಲೀಫಾ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಶಿಖದರ್ ಆಡಬೇಕು, ಯಾವ ಕ್ರಮಾಂಕದಲ್ಲಿ ಎಂದು ನನ್ನನ್ನ ಕೇಳ್ಬೇಡಿ. ನಾನು ಸೆಲೆಕ್ಟರ್ ಆಗಿದ್ರೆ ಖಂಡಿತಾವಾಗಿ ಹೇಳುತ್ತಿದ್ದೆ ಎಂದಿದ್ದಾರೆ. ಅಂದಹಾಗೆ ಖಲಫಾ ಅಂದ್ರೆ ಉತ್ತರಾಧಿಕಾರಿ, ರೂಲರ್ ಎಂದು ಅರ್ಥ ಬರುತ್ತದೆ.
ಸಿಎಸ್ ಕೆ ವಿರುದ್ಧದ ಪಂದ್ಯದಲ್ಲಿ ಧವನ್ ಹಲವು ಅಪರೂಪದ ಮೈಲುಗಲ್ಲುಗಳನ್ನು ದಾಟಿದರು. ಕ್ಯಾಶ್ ರಿಚ್ ಲೀಗ್‌ನಲ್ಲಿ ಕೊಹ್ಲಿ (6402) ನಂತರ 6000 ರನ್ ಗಡಿ ದಾಟಿದ ಎರಡನೇ ಆಟಗಾರ, ಐಪಿಎಲ್‌ನಲ್ಲಿ ಒಂದು ತಂಡದ ವಿರುದ್ಧ 1000 ರನ್ ಪೂರೈಸಿದ ಮೂರನೇ ಆಟಗಾರ ಮತ್ತು ಕೊಹ್ಲಿ, ರೋಹಿತ್ ನಂತರ ಟಿ 20 ಕ್ರಿಕೆಟ್ ನಲ್ಲಿ 9000 ರನ್ ಗಡಿ ದಾಟಿದ ಮೂರನೇ ಭಾರತೀಯ ಎಂದ ದಾಖಲೆ ಬರೆದಿದ್ದಾರೆ.